‘‘ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ, ಇನ್ನಾದರೂ ವಾಸ್ತವ ಅರಿತು ಕೆಲಸ ಮಾಡಿ’’

Update: 2021-05-16 07:30 GMT

ಬೆಂಗಳೂರು, ಮೇ 16: ಕೋವಿಡ್ ಮೊದಲ ಅಲೆಯ ನಂತರ ಜನರು, ಸರಕಾರದಿಂದ ನಿರ್ಲಕ್ಷ್ಯ ಉಂಟಾಯಿತು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದು, ಇದನ್ನು ಉಲ್ಲೇಖಿಸಿದ ರಾಜ್ಯ ಕಾಂಗ್ರೆಸ್ ‘ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ. ಇನ್ನಾದರೂ ವಾಸ್ತವ ಅರಿತು ಕೆಲಸ ಮಾಡಿ’ ಎಂದು ರಾಜ್ಯ ಸರಕಾರವನ್ನು ಕುಟುಕಿದೆ.

ಕೊರೋನ ಸಾಂಕ್ರಾಮಿ ರೋಗದ ಮೊದಲ ಅಲೆಯ ನಂತರ ರಾಷ್ಟ್ರದ ಎಲ್ಲಾ ವರ್ಗದವರು ತೋರಿಸಿರುವ ನಿರ್ಲಕ್ಷ್ಯವು ದೇಶಾದ್ಯಂತ ಈಗ ತಲೆದೋರಿರುವ ವೈದ್ಯಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಕೊರೋದ ಮೊದಲ ಅಲೆಯ ನಂತರ ನಾವೆಲ್ಲರೂ ನಿರ್ಲಕ್ಷ್ಯ ವಹಿಸಿದ್ದೇವೆ. ಜನರು, ಸರಕಾರಗಳು, ಆಡಳಿತ ನಿರ್ಲಕ್ಷ್ಯ ತೋರಿದವು ಎಂದು ಮೋಹನ್ ಭಾಗವತ್ ಹೇಳಿದ್ದರು.

ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಕಾಂಗ್ರೆಸ್, ''ನಿರ್ಲಕ್ಷ್ಯ ವಹಿಸಿದ್ದೀರಿ ಎಂದು ನಾವು ಹೇಳಿದರೆ 'ರಾಜಕೀಯ' ಎಂದಿರಿ, ರಾಹುಲ್ ಗಾಂಧಿ ಅವರ ಎಚ್ಚರಿಕೆಯನ್ನು ಕಡೆಗಣಿಸಿ ಟೀಕಿಸಿದಿರಿ, ಈಗ ನಿಮ್ಮ ಶಂಖದಿಂದಲೇ ತೀರ್ಥ ಬಂದಿದೆ. ಇನ್ನಾದರೂ 'ಇಮೇಜ್ ಬಿಲ್ಡಿಂಗ್' ಬಿಟ್ಟು ವಾಸ್ತವ ಅರಿತು ಕೆಲಸ ಮಾಡಿ, ದೇಶದ ಆರ್ಥಿಕ ಸಂಪನ್ಮೂಲ ಕಳೆದಾಗಿದೆ, ಮಾನವ ಸಂಪನ್ಮೂಲವನ್ನಾದರೂ ಕಾಪಾಡಿ'' ಎಂದು ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News