ಆರ್‍ಟಿಪಿಸಿಆರ್ ಫಲಿತಾಂಶ 24 ಗಂಟೆಯಲ್ಲಿ ನೀಡದಿದ್ದರೆ ಕಾನೂನು ಕ್ರಮ: ಆರೋಗ್ಯ ಇಲಾಖೆ

Update: 2021-05-16 16:55 GMT

ಬೆಂಗಳೂರು, ಮೇ 16: ಕೋವಿಡ್ ಸೋಂಕನ್ನು ಪತ್ತೆ ಹಚ್ಚಲು ಆರ್‍ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶವನ್ನು 24 ಗಂಟೆಯೊಳಗಾಗಿ ನೀಡಬೇಕು. ಹಾಗೂ ಸದರಿ ಮಾಹಿತಿಯನ್ನು ಐಸಿಎಂಆರ್ ಪೋರ್ಟಲ್‍ನಲ್ಲಿ ನಮೂದಿಸಬೇಕೆಂದು. ವಿಳಂಬವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಆರ್‍ಟಿಪಿಸಿಆರ್ ಫಲಿತಾಂಶವನ್ನು 24 ಗಂಟೆಯೊಳಗೆ ನೀಡಬೇಕೆಂದು ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಆದರೂ ಕೆಲವು ಪ್ರಯೋಗಾಲಯಗಳು 24 ಗಂಟೆಯೊಳಗಾಗಿ ಮಾದರಿಗಳ ಫಲಿತಾಂಶ ನೀಡುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಎಲ್ಲ ಪ್ರಯೋಗಾಲಯಗಳಿಗೆ ಸೂಚನೆ ನೀಡಲಾಗುತ್ತಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News