24 ಗಂಟೆಗಳಲ್ಲಿ ಕೊರೋನ ಸೋಂಕಿನ 3.11 ಲಕ್ಷ ಹೊಸ ಪ್ರಕರಣಗಳು ದಾಖಲು: 4,077 ಮಂದಿ ಸಾವು

Update: 2021-05-16 19:15 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ 3.11 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 2,46,84,077ಕ್ಕೆ ಏರಿಕೆಯಾಗಿದೆ ಎಂದು ರವಿವಾರ ಪರಿಷ್ಕೃತಗೊಂಡ ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ಹೇಳಿದೆ. ‌

ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನಿಂದ 4,077 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 2,70,284ಕ್ಕೆ ಏರಿಕೆಯಾಗಿದೆ ಎಂದು ದತ್ತಾಂಶ ಹೇಳಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 36,18,458ಕ್ಕೆ ಇಳಿಕೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಶೇ. 14.6. ಕೊರೋನ ಸೋಂಕಿನ ಚೇತರಿಕೆ ದರ ಶೇ. 84.25ಕ್ಕೆ ಏರಿಕೆಯಾಗಿದೆ ಎಂದು ದತ್ತಾಂಶ ಹೇಳಿದೆ.

ಕೊರೋನ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆ 2,07,95,335ಕ್ಕೆ ಏರಿಕೆಯಾಗಿದೆ. ಸಾವಿನ ದರ ಶೇ. 1.09 ದಾಖಲಾಗಿದೆ ಎಂದು ದತ್ತಾಂಶ ಹೇಳಿದೆ. ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಆಗಸ್ಟ್ 7ರಂದು 20 ಲಕ್ಷ, ಆಗಸ್ಟ್ 23ರಂದು 30 ಲಕ್ಷ, ಸೆಪ್ಟಂಬರ್ 5ರಂದು 40 ಲಕ್ಷ, ಸೆಪ್ಟಂಬರ್ 16ರಂದು 50, ಸೆಪ್ಟಂಬರ್ 28ರಂದು 60 ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್ 20ರಂದು 90 ಲಕ್ಷ, ಡಿಸೆಂಬರ್ 19ರಂದು 90 ಲಕ್ಷದ ಗಡಿ ದಾಟಿತ್ತು. ಮೇ 4ರಂದು 2 ಕೋಟಿಯ ಗಡಿ ದಾಟಿತ್ತು.

ಐಸಿಎಂಆರ್ ಪ್ರಕಾರ, ಶನಿವಾರ 18,32,950 ಮಾದರಿಗಳ ಪರೀಕ್ಷೆ ನಡೆಸುವುದರೊಂದಿಗೆ ಮೇ 15ರ ವರೆಗೆ 31,48,50,143 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News