ಚಾಮರಾಜನಗರ: 4 ದಿನಗಳ ಸಂಪೂರ್ಣ ಲಾಕ್ಡೌನ್ ತೆರವು: ದಿನಸಿ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನತೆ

Update: 2021-05-17 07:02 GMT

ಚಾಮರಾಜನಗರ, ಮೇ 17: ಕೋವಿಡ್-19 ನಿಯಂತ್ರಣಕ್ಕಾಗಿ ಹೇರಲಾಗಿದ್ದ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಮುಗಿಯುತ್ತಿದ್ದಂತೆ ಸೋಮವಾರ ಬೆಳಗ್ಗೆ ರಸ್ತೆಗಿಳಿದ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಚಾಮರಾಜನಗರ ಟಾಸ್ಕ್ ಪೋರ್ಸ್ ಸೂಚನೆಯಂತೆ ಜಿಲ್ಲಾಡಳಿತ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಹೇರಿತ್ತು. ವಾರದ ಕೊನೆಯ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಗೆ ತೆರೆ ಬೀಳುತ್ತಿದ್ದಂತೆ ವಾರದ ಮೊದಲ ದಿನವಾದ ಸೋಮವಾರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿನ ಅಂಗಡಿ ಬೀದಿಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಜನರು ಅಗತ್ಯ ವಸ್ತುಗಳ ಖರೀದಿಗೆ ದ್ವಿಚಕ್ರ ವಾಹನದೊಂದಿಗೆ ಆಗಮಿಸಿದ್ದರು. ಅಂಗಡಿ ಬೀದಿಗಳಲ್ಲಿ ವಾಹನ ಸಂಚಾರವೂ ಅಧಿಕವಾಗಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.

ಬೆಳಗ್ಗೆಯಿಂದಲೇ ಸಾರ್ವಜನಿಕರು ದಿನಸಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ಬೆಳಗ್ಗೆ 8:30ರ ಸುಮಾರಿಗೆ ಮತ್ತಷ್ಟು ಸಾರ್ವಜನಿಕರು ರಸ್ತೆಗಿಳಿದ ಪರಿಣಾಮ ಅಂಗಡಿ ಬೀದಿಗಳು ಜನ ಜಾತ್ರೆಯಾಗಿತ್ತು.

ದಿನಸಿ ಅಂಗಡಿ, ತರಕಾರಿ ಅಂಗಡಿ, ಸೊಪ್ಪು ಖರೀದಿಯಲ್ಲಿ ಸಾರ್ವಜನಿಕರು ಮುಂದಾಗಿದ್ದರು. ಸುರಕ್ಷಾ ತಂಡದವರು ಆಗಮಿಸಿ ಸಂಚಾರ ನಿಯಂತ್ರಣಕ್ಕೆ ಹರಸಾಹಸಪಟ್ಟರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News