ರಾಹುಲ್ ಎದುರು ಕೈಕಟ್ಟಿ ನಿಂತು ಗುಲಾಮಗಿರಿಯಲ್ಲೇ ಪರಮಸುಖ ಕಾಣುವ ಸಿದ್ದರಾಮಯ್ಯ, ಡಿಕೆಶಿ: ಬಿಜೆಪಿ ವ್ಯಂಗ್ಯ

Update: 2021-05-20 09:26 GMT

ಬೆಂಗಳೂರು, ಮೇ 20: ಬಂಗಾಳ ಫಲಿತಾಂಶದ ಬಳಿಕ ಕಾಂಗ್ರೆಸ್ ಸಾಧನೆಯನ್ನು ಮೌಲ್ಯಮಾಪನ‌ದ ಬದಲಾಗಿ ಬಿಜೆಪಿ ಟೀಕಿಸಿದ್ದ ರಾಹುಲ್ ಗಾಂಧಿ ಪಟಾಲಂಗೆ ವೀರಪ್ಪ ಮೊಯ್ಲಿ ಹೇಳಿಕೆ‌ ಕಪಾಳ ಮೋಕ್ಷವಾಗಿದೆ. ದುರ್ಬಲ‌ ನಾಯಕತ್ವವನ್ನು ಸ್ವಪಕ್ಷೀಯ ರಾಷ್ಟ್ರೀಯ ನಾಯಕರೇ ಟೀಕಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮೊಯ್ಲಿ ಅವರೇ, ನಿಮಗೂ ನೋಟೀಸ್ ಕಾದಿದೆ ಎಂದು ರಾಜ್ಯ ಬಿಜೆಪಿಯು ವ್ಯಂಗ್ಯವಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ದುರ್ಬಲ ನಾಯಕತ್ವವೇ ಕಾರಣ ಎಂದು ಮೊಯ್ಲಿ ಹೇಳಿದ್ದಾರೆ. ರಾಹುಲ್ ನಾಯಕತ್ವಕ್ಕೆ ಭವಿಷ್ಯವಿಲ್ಲ ಎಂದು ಷರಾ ಬರೆದ ಮೊಯ್ಲಿ ಹೇಳಿಕೆಯನ್ನು ಅರಗಿಸಿಕೊಳ್ಳುವ ತಾಕತ್ತು ಡಿಕೆಶಿ, ಸಿದ್ದರಾಮಯ್ಯ ಅವರಿಗಿದೆಯೇ? ಎಂದು ಪ್ರಶ್ನಿಸಿದೆ.

ಎಐಸಿಸಿ ಅಧ್ಯಕ್ಷರ ಆಯ್ಕೆ ಪ್ರಹಸನ ಕಳೆದ ಒಂದು ವರ್ಷದಿಂದ‌ ನಡೆಯುತ್ತಿದೆ. ಹಂಗಾಮಿ ವ್ಯವಸ್ಥೆ ದುರ್ಬಲವಾಗಿದೆ ಎಂದು ಮೊಯ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಎದುರು ಕೈ ಕಟ್ಟಿ ನಿಂತು ಗುಲಾಮಗಿರಿಯಲ್ಲೇ ಪರಮಸುಖ ಕಾಣುವ ಸಿದ್ದರಾಮಯ್ಯ, ಡಿಕೆಶಿ ಅವರೇ ಹಂಗಾಮಿ ನಾಯಕತ್ವದ ಕುರಿತು ಮಾತನಾಡುವ ಧೈರ್ಯ ತೋರುವಿರಾ? ಎಂದು ಬಿಜೆಪಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News