ಅಮೆರಿಕದ ಕೊಲೋನಿಯಲ್ ಪೈಪ್ಲೈನ್ ಮೇಲೆ ಸೈಬರ್ ದಾಳಿ: ದಾಳಿಕೋರರಿಗೆ 32 ಕೋಟಿ ರೂ. ಪಾವತಿ

Update: 2021-05-20 18:35 GMT

ವಾಶಿಂಗ್ಟನ್, ಮೇ 20: ಅಮೆರಿಕದ ಬೃಹತ್ ತೈಲ ಪೈಪ್ಲೈನ್ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ನಡೆದ ಸೈಬರ್ ದಾಳಿಯ ಬಳಿಕ, ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳಲು ದಾಳಿಕೋರರಿಗೆ 4.4 ಮಿಲಿಯ ಡಾಲರ್ (ಸುಮಾರು 32 ಕೋಟಿ ರೂಪಾಯಿ) ಒತ್ತೆಹಣ ನೀಡಲಾಗಿದೆ ಎಂದು ಮಾಲೀಕ ಕಂಪೆನಿ ಕೊಲೋನಿಯಲ್ ಪೈಪ್ಲೈನ್ ತಿಳಿಸಿದೆ.

  
ಅದು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ಸರಿಯಾದ ನಿರ್ಧಾರವಾಗಿತ್ತುಎಂದು ಅದು ಹೇಳಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ.
 
ಹಣ ಪಾವತಿಸಿರುವುದು ಅತ್ಯಂತ ವಿವಾದಾಸ್ಪದ ನಿರ್ಧಾರ ಎನ್ನುವುದು ನನಗೆ ಗೊತ್ತು ಎಂದು ಕಂಪೆನಿಯ ಮುಖ್ಯಸ್ಥ ಜೋಸೆಫ್ ಬ್ಲೌಂಟ್ ಹೇಳಿದರು. ಆದರೆ, ದಾಳಿಯ ಬಳಿಕ ಹಲವು ದಿನಗಳ ಕಾಲ ಪೈಪ್ಲೈನ್ ಸ್ಥಗಿತಗೊಂಡಿತ್ತು. ಅದು ಅಮೆರಿಕದ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮವನ್ನು ಗಣನೆಗೆ ತೆಗೆದುಕೊಂಡರೆ, ನಾವು ತೆಗೆದುಕೊಂಡ ಕ್ರಮವು ಅಗತ್ಯವಾಗಿತ್ತುಎಂದರು.

ತೈಲ ಸಾಗಾಟ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದಾಗಿ ಕೊಲೋನಿಯಲ್ ಕಳೆದ ವಾರದ ಗುರುವಾರ ಘೋಷಿಸಿತ್ತು. ಸೈಬರ್ ದಾಳಿಯ ಬಳಿಕ ಮೇ 7ರಿಂದ ತೈಲ ಪೈಪ್ಲೈನ್ ಸ್ಥಗಿತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News