×
Ad

ಶಿವಮೊಗ್ಗ: ಕೋವಿಡ್ ಸೋಂಕಿತರಿಗಾಗಿ ಉಚಿತ ಆ್ಯಂಬುಲೆನ್ಸ್ ಸೇವೆಗೆ ಜಿಲ್ಲಾಧಿಕಾರಿ ಚಾಲನೆ

Update: 2021-05-21 16:02 IST

ಶಿವಮೊಗ್ಗ, ಮೇ 21: ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಹಾಗೂ ಮಾನಸ ಸಮೂಹ ಸಂಸ್ಥೆಗಳು ಜಂಟಿಯಾಗಿ ಕೋವಿಡ್ ಸೋಂಕಿತರಿಗಾಗಿ ಉಚಿತ  ಆ್ಯಂಬುಲೆನ್ಸ್ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ.ರಜನಿಪೈ, ಡಾ.ಪ್ರೀತಿ ಶಾನುಭಾಗ್, ಡಾ.ದಿನೇಶ್ ಎಸ್, ರೋಟರಿ ವಿಜಯ್‌ಕುಮಾರ್, ಧರಣೇಂದ್ರ ದಿನಕರ್, ಪ್ರೊ.ಚಂದ್ರಶೇಖರ್, ಬಸವರಾಜ್, ಭಾರತಿ ಚಂದ್ರಶೇಖರ್ ಮೊದಲಾದವರಿದ್ದರು.

ಈ ಆಂಬುಲೆನ್ಸ್ ವಾಹನದಲ್ಲಿ ಆಕ್ಸಿಜನ್ ವ್ಯವಸ್ಥೆ ಹೊಂದಿದ್ದು, ಶಿವಮೊಗ್ಗ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಿರುತ್ತದೆ. ಕೋವಿಡ್ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆಗೆ ಇದನ್ನು ಬಳಸಬಹುದಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಲಭ್ಯವಿರುತ್ತದೆ. ಆ್ಯಂಬುಲೆನ್ಸ್‌ಗಾಗಿ ಮೊ: 9606967825 ಕ್ಕೆ ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News