ʼರಾಜೀವ್‌ ಗಾಂಧಿ ಭಾರತದ ಅತೀದೊಡ್ಡ ಭಯೋತ್ಪಾದಕʼ ಎಂದು ಟ್ವೀಟ್‌ ಮಾಡಿದ ಮಹೇಶ್‌ ವಿಕ್ರಮ್‌ ಹೆಗ್ಡೆ

Update: 2021-05-21 11:45 GMT
photo: thenewsminute

ಬೆಂಗಳೂರು: ಹಲವಾರು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರ ನಡುವೆ ದ್ವೇಷ ಬಿತ್ತುತ್ತಿರುವ ಪೋಸ್ಟ್‌ ಕಾರ್ಡ್‌ ಎಂಬ ವೆಬ್ ಸೈಟ್‌ ನ ಸಂಸ್ಥಾಪಕ ಮಹೇಶ್ ವಿಕ್ರಮ್‌ ಹೆಗ್ಡೆ ಎಂಬಾತ ಇದೀಗ ಮತ್ತೊಂದು ವಿವಾದಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾನೆ. ಭಾರತದ ಮಾಜಿ ಪ್ರಧಾನಮಂತ್ರಿ ರಾಜೀವ್‌ ಗಾಂಧಿಯವರನ್ನು ʼಭಾರತದ ಅತೀದೊಡ್ಡ ಭಯೋತ್ಪಾದಕʼ ಎಂದು ಟ್ವೀಟ್‌ ಮಾಡಿದ್ದು ಸದ್ಯ ವಿವಾದಕ್ಕೀಡಾಗಿದೆ.

"ಭೋಪಾಲ್‌ ಅನಿಲ ದುರಂತದಲ್ಲಿ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾದ ವ್ಯಕ್ತಿ, ಇಂದಿರಾ ಮೃತಪಟ್ಟ ಬಳಿಕ ಲಕ್ಷಾಂತರ ಸಿಖ್ಖರನ್ನು ಮಾರಣಹೋಮ ಮಾಡಲು ಕರೆ ನೀಡಿದ್ದ ವ್ಯಕ್ತಿ, ಬೋಫೋರ್ಸ್‌ ಹಗರಣದಲಲಿ ಸೈನಿಕರ ಜೀವಗಳೊಂದಿಗೆ ಆಟವಾಡಿದ ವ್ಯಕ್ತಿ, ಆತ ಭಾರತದ ಅತೀದೊಡ್ಡ ಭಯೋತ್ಪಾದಕ ರಾಜೀವ್‌ ಗಾಂಧಿ" ಎಂದು ಮಹೇಶ್‌ ವಿಕ್ರಮ್‌ ಹೆಗ್ಡೆ ಟ್ವೀಟ್‌ ಮಾಡಿದ್ದಾನೆ.

ಈ ಟ್ವೀಟ್‌ ಸಾಮಾಜಿಕ ತಾಣದಾದ್ಯಂತ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು, "ಭೋಪಾಲ್‌ ಅನಿಲ ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆನ್ನುವ ಎಣಿಕೆ ನಿನಗೆ ತಿಳಿದಿದೆಯೇ? ಅದು 4000 ಮೀರಿರಲಿಕ್ಕಿಲ್ಲ. ಗುಜರಾತ್‌ ಗಲಭೆಯ ಸಂದರ್ಭದಲ್ಲಿ ಮೋದಿ ಅದಕ್ಕಿಂತಲೂ ಹೆಚ್ಚು ಮಂದಿ ಕೊಲೆಗೆ ಕಾರಣರಾಗಿದ್ದಾರೆ. ಇನ್ನು, ಕೋವಿಡ್‌ ಸಂದರ್ಭದಲ್ಲಿ ಎಷ್ಟು ಮಂದಿ ಭಾರತೀಯರು ಮೃತಪಟ್ಟರು ಎನ್ನುವುದನ್ನು ಎಣಿಸಲೂ ಸಾಧ್ಯವಿಲ್ಲ. ಮೊದಲೇ ಸುಳ್ಳು ಹೇಳುವುದು ನಿಮಗೆ ತಿಳಿದಿತ್ತೇ? ಅಥವಾ ಬಿಜೆಪಿಗೆ ಸೇರಿದ ಬಳಿಕ ಅದು ತನ್ನಿಂತಾನೆಯೇ ಬರುತ್ತದೆಯೇ? ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News