×
Ad

ಧಾರವಾಡ: ಸುಮಾರು 15 ಸಾವಿರ ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ್ದ ಮುಸ್ತಾಕ್ ಅಹ್ಮದ್ ನಿಧನ

Update: 2021-05-22 11:23 IST

ಧಾರವಾಡ: ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಕೊಡುಗೆಯಾಗಿ ನೀಡಿದ್ದ ಅಂಬ್ಯುಲೆನ್ಸ್ ಮೂಲಕ ಕಳೆದ 21 ವರ್ಷಗಳಲ್ಲಿ ಸುಮಾರು 15 ಸಾವಿರ ಮೃತದೇಹಗಳನ್ನು ಸಾಗಿಸಿ ಅವುಗಳ ಅಂತಿಮ ವಿಧಿ ವಿಧಾನ ಮಾಡಿದ್ದ ಮುಸ್ತಾಕ್ ಅಹ್ಮದ್ ಖಾತ್ರಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ.

ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಮುಸ್ತಾಕ್ ಅಹ್ಮದ್ ಖಾತ್ರಿಗೆ 'ಮರಳಿ ಮಣ್ಣಿಗೆ' ಎಂಬ ಅಂಬ್ಯುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಿತ್ತು.

ಕಳೆದ 21 ವರ್ಷಗಳಿಂದ ಈ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುಸ್ತಾಕ್ ಎಲ್ಲ ಧರ್ಮಗಳ ಮೃತರ ಶವ ಸಂಸ್ಕಾರ, ವಿಧಿ, ವಿಧಾನದ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಿದವರಾಗಿದ್ದರು. ಕೊರೋನದಿಂದ ಮೃತಪಡುವ 4-5 ಜನರ ಶವ ಸಂಸ್ಕಾರವನ್ನು ಮುಸ್ತಾಕ್ ಪ್ರತಿದಿನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News