ಮೈಸೂರಿನ ಬೆಳವಾಡಿಯಲ್ಲಿ ಮೂರು ಚಿರತೆಗಳು ಅನುಮಾನಾಸ್ಪದ ಸಾವು
Update: 2021-05-22 19:00 IST
ಮೈಸೂರು: ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿವೆ. ವಿಷಯ ತಿಳಿದು ಶನಿವಾರ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸುಮಾರು 4-5 ವರ್ಷ ವಯಸ್ಸಿನ ಒಂದು ಹೆಣ್ಣು ಚಿರತೆ, 8-10 ತಿಂಗಳ ಎರಡು ಚಿರತೆ ಮರಿಗಳು ಮೃತಪಟ್ಟಿವೆ.
ಚಿರತೆಗಳು ಸಹಜವಾಗಿ ಸಾವನ್ನಪ್ಪಿಲ್ಲ ಎಂದು ಹೇಳಲಾಗಿತ್ತಿದ್ದು, ಮೃತ ಚಿರತೆಗಳ ಹತ್ತಿರದಲ್ಲಿ ಅರ್ಧ ತಿಂದು ಬಿಟ್ಟ ಬೀದಿನಾಯಿಯ ಮೃತದೇಹ ದೊರೆತಿದೆ. ಆ ಮೃತ ನಾಯಿಯ ದೇಹದ ಮೇಲೆ ಕೀಟನಾಶಕ ಸಿಂಪಡಿಸಿರುವುದು ತಿಳಿದು ಬಂದಿದೆ. ಹಾಗಾಗಿ ಈ ಚಿರತೆಗಳದ್ದು ಸಹಜ ಸಾವಲ್ಲ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮೈಸೂರು ಮೃಗಾಲಯ ಹಾಗೂ ಹಿನಕಲ್ ಗ್ರಾಮದ ಸ್ಥಳೀಯ ಪಶು ವೈದ್ಯಾಧಿಕಾರಿಗಳ ತಂಡ ಆಗಮಿಸಿ ಶವ ಪರೀಕ್ಷೆಯನ್ನು ನಡೆಸಿ ಅಂಗಾಂಗಗಳ ಮಾದರಿಯನ್ನು ಬೆಂಗಳೂರು ಹಾಗೂ ಮೈಸೂರಿನ ಪ್ರಯೋಗಾಲಯಗಳೀಗೆ ಕಳುಹಿಸಿದ್ದು, ವರದಿ ಬಂದ ನಂತರ ಚಿರತೆಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.