"ಬಿಜೆಪಿಗೆ ಸೇರಿ ತಪ್ಪು ಮಾಡಿದೆ": ಮರಳಿ ಟಿಎಂಸಿ ಸೇರುವ ಬಯಕೆ ವ್ಯಕ್ತಪಡಿಸಿದ ಮತ್ತೋರ್ವ ಮಹಿಳಾ ನಾಯಕಿ

Update: 2021-05-23 12:50 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಜಯಗಳಿಸಿ ಅಧಿಕಾರಕ್ಕೇರಿದೆ. ಈ ಹಿಂದೆ ಬಿಜೆಪಿಯ ಪುಸಲಾಯಿಸುವಿಕೆಗೆ ಮಣಿದು ಟಿಎಂಸಿ ತೊರೆದಿದ್ದ ಅಭ್ಯರ್ಥಿಗಳು ಮತ್ತೆ ತಮ್ಮ ಹಳೆಯ ಪಕ್ಷದತ್ತ ಮುಖಮಾಡುತ್ತಿದ್ದಾರೆ. ನಿನ್ನೆಯಷ್ಟೇ ಸೋನಾಲಿ ಗುಹಾ ಎಂಬವರು ಟಿಎಂಸಿಗೆ ಮರಳಿ ಬರುವ ಇಚ್ಛೆ ವ್ಯಕ್ತಪಡಿಸಿದ್ದು, ಅದರ ಬೆನ್ನಲ್ಲೇ ಇದೀಗ ಸರಳಾ ಮುರ್ಮು ಎಂಬ ಮಹಿಳಾ ನಾಯಕಿ ಟಿಎಂಸಿಗೆ ಮರಳಿ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

"ಬಿಜೆಪಿ ಪಕ್ಷಕ್ಕೆ ಸೇರಿ ನಾನು ತಪ್ಪು ಮಾಡಿಬಿಟ್ಟಿದ್ದೇನೆ. ಟಿಎಂಸಿ ಪಕ್ಷ ಹಾಗೂ ಮಮತಾ ಬ್ಯಾನರ್ಜಿ ನನ್ನನ್ನು ಕ್ಷಮಿಸಬೇಕು" ಎಂದು ಅವರು ಹೇಳಿದ್ದು, "ಅವರು ನನ್ನನ್ನು ಒಪ್ಪಿಕೊಂಡರೆ ನಾನು ಆಕೆಯೊಂದಿಗೆ ನಿಲ್ಲುತ್ತೇನೆ ಹಾಗೂ ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ತಪ್ಪು ಮಾಡಿದ್ದೇನೆ. ದೀದಿ ನನ್ನನ್ನು ಕ್ಷಮಿಸುತ್ತಾರೆಂಬ ಭರವಸೆ ನನಗಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News