ಭಾರತವನ್ನು ಜಾತಿ ಶ್ರೇಷ್ಠತೆಯ ಪ್ರಜ್ಞೆ ಕಾಡುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2021-05-23 13:00 GMT

ಬೆಂಗಳೂರು, ಮೇ 23: `ಸಾವು ನೋವುಗಳ ಈ ಸಂಕಷ್ಟಮಯ ಪರಿಸ್ಥಿತಿಯಲ್ಲೂ ದಲಿತರ ಮೇಲಿನ ಕ್ರೌರ್ಯದ ಪರಮಾವಧಿಗೆ ಎಣೆಯಿಲ್ಲದಂತಾಗಿದೆ. ಜಗತ್ತನ್ನು ಕೊರೋನ ಸೋಂಕು ಕಾಡುತ್ತಿದ್ದರೆ ಭಾರತವನ್ನು ಜಾತಿ ಶ್ರೇಷ್ಠತೆಯ ಪ್ರಜ್ಞೆಯು ಕಾಡುತ್ತಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ದೌರ್ಜನ್ಯ ನಡೆಸಿದ್ದಾರೆನ್ನಲಾದ ಘಟನೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, `ರಾಜ್ಯದ ಬಿಜೆಪಿ ಸರಕಾರ ಕೂಡಲೇ ಬಾಯಿಗೆ ಮೂತ್ರ ಹುಯ್ಯಿಸಿ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯ ಎಸಗಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇನೆ' ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗದ್ಗದಿತರಾಗಿದ್ದು ಅವರ ಹಲವು ನಾಟಕಗಳ ಮುಂದುವರೆದ ಅಧ್ಯಾಯವಷ್ಟೇ. ಪ್ರಧಾನಿಗಳೇ ನೀವು ನಕ್ಕರೂ ಅಷ್ಟೇ ಅತ್ತರೂ ಅಷ್ಟೇ, ದೇಶದ ಜನಸಾಮಾನ್ಯರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರ ಮೂಕ ಅಳುವಿನಲ್ಲಿ ಪ್ರಭುತ್ವವನ್ನು ಉರುಳಿಸುವ ತಾಕತ್ತಿದೆ ಎಂಬುದನ್ನು ಮರೆಯಬೇಡಿ ಪ್ರಧಾನಿಗಳೇ..!' ಎಂದು ಮಹದೇವಪ್ಪ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News