×
Ad

ಧಾರ್ಮಿಕ ಕೇಂದ್ರಗಳ ಸಿಬ್ಬಂದಿಗಳಿಗೆ ಪರಿಹಾರದಲ್ಲಿ ತಾರತಮ್ಯ ಯಾಕೆ?: ಎಸ್‍ಡಿಪಿಐ

Update: 2021-05-23 22:23 IST

ಬೆಂಗಳೂರು, ಮೇ 22: ರಾಜ್ಯ ಸರಕಾರ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಯ ಅಡಿಯಲ್ಲಿರುವ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಕೋವಿಡ್ ಪರಿಹಾರ ಧನ ಸಹಾಯ ಮತ್ತು ಕಿಟ್ ವಿತರಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ, ಇದರಲ್ಲಿ ಮುಸ್ಲಿಮ್, ಕ್ರೈಸ್ತ, ಜೈನ, ಫಾರ್ಸಿ, ಬೌದ್ಧ ಮತ್ತು ಸಿಖ್ ಧಾರ್ಮಿಕ ಕೇಂದ್ರಗಳ ಆಧ್ಯಾತ್ಮಿಕ ಗುರುಗಳು ಮತ್ತು ಸಿಬ್ಬಂದಿಗಳಿಗೂ ವೇತನ ಮತ್ತು ದಿನಸಿ ಕಿಟ್ ಕೊಡಬೇಕು. ಧಾರ್ಮಿಕ ತಾರತಮ್ಯ ಏಕೆ? ಎಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಪ್ರಶ್ನಿಸಿದ್ದಾರೆ.

ಸರಕಾರಗಳು ಯಾವುದೇ ಜಾತಿ-ಧರ್ಮ, ಪಕ್ಷ, ಪಂಗಡ, ಭಾಷೆಯ ಜನರ ಮಧ್ಯೆ ಭೇದ-ಭಾವ ಮಾಡಬಾರದು. ಸರಕಾರದ ಯೋಜನೆ ಸಹಾಯ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುವುದು ಸಂವಿಧಾನದ ಆಶಯವಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಆಗಾಗ ಪಕ್ಷಪಾತ ನೀತಿ ಅನುಸರಿಸುತ್ತಿರುವುದನ್ನು ನಿಲ್ಲಿಸಬೇಕು. ಇದಕ್ಕಾಗಿ ಎಲ್ಲ ಜಾತ್ಯತೀತ ಶಕ್ತಿಗಳು ಒಂದಾಗಿ ಹೋರಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News