ಕೋವಿಡ್‍ನಿಂದ ರಕ್ಷಣೆಗೆ ಡಬಲ್ ಮಾಸ್ಕ್ ಹಾಕುವುದು ಅಗತ್ಯ: ಡಾ.ಅನಿರುದ್ಧ ಕಂಜರ್ಪಣೆ

Update: 2021-05-23 16:54 GMT

ಬೆಂಗಳೂರು, ಮೇ 23: ಕೋವಿಡ್ ಎರಡನೆ ಅಲೆಯಲ್ಲಿ ವೈರಸ್ ರೂಪಾಂತರಗೊಂಡಿದ್ದು, ಇದರಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಅಗತ್ಯವಿದೆ ಎಂದು ಆರೋಗ್ಯ ತಜ್ಞ ಡಾ.ಅನಿರುದ್ಧ ಕಂಜರ್ಪಣೆ ತಿಳಿಸಿದ್ದಾರೆ.

ರವಿವಾರ ಕರ್ನಾಟಕ ದಲಿತ ಮಹಿಳಾ ವೇದಿಕೆ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಕೋವಿಡ್ ಸಂದರ್ಭದ ಸವಾಲುಗಳ ಕುರಿತು ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಎಲ್ಲರೂ ಎನ್-95 ಮಾಸ್ಕ್ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕನಿಷ್ಟ ಡಬಲ್ ಮಾಸ್ಕ್ ಗಳನ್ನು ಹಾಕಿಕೊಳ್ಳುವ ಮೂಲಕ ಕೋವಿಡ್‍ನಿಂದ ರಕ್ಷಣೆ ಪಡೆದುಕೊಳ್ಳುವುದು ಒಳ್ಳೆಯದೆಂದು ತಿಳಿಸಿದ್ದಾರೆ.

ಸರಕಾರ ಹಾಗೂ ತಜ್ಞ ವೈದ್ಯರು ಕೋವಿಡ್ ನಿಯಂತ್ರಣಕ್ಕೆ ಕೋವಿಡ್ ಲಸಿಕೆ ಪರಿಹಾರವೆಂದು ಹೇಳುತ್ತಿದ್ದಾರೆ. ಆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ  ಕೋವಿಡ್ ಲಸಿಕೆ ಕುರಿತು ಅಪನಂಬಕೆಗಳು ಮನೆ ಮಾಡಿವೆ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕಾಗದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಹಿಳೆಯರ ಆರೋಗ್ಯ ಮತ್ತು ಕೋವಿಡ್ ಸಂಕೀರ್ಣತೆಗಳ ಕುರಿತು ಡಾ. ಭಾಗ್ಯಶ್ರೀ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News