ಮಹಿಳಾ ಕಾನ್ಸ್ ಟೇಬಲ್ ಮನೆಯಲ್ಲಿದ್ದ 180 ಗ್ರಾಂ ಚಿನ್ನಾಭರಣ ಕಳವು
Update: 2021-05-23 22:25 IST
ಬಸವಕಲ್ಯಾಣ, ಮೇ 23: ಪೊಲೀಸ್ ಇಲಾಖೆಯ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರ ಮನೆಯಲ್ಲಿ 18 ತೊಲೆ(180 ಗ್ರಾಂ) ಚಿನ್ನಾಭರಣ ಕಳವು ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಕಾನ್ಸ್ ಟೇಬಲ್ ಸುಧಾರಾಣಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, 9 ಲಕ್ಷ ರೂ. ಮೌಲ್ಯದ 18 ತೊಲೆ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳವು ಮಾಡಲಾಗಿದೆ ಎನ್ನಲಾಗಿದೆ.
ಇಲ್ಲಿನ ಹುಲಸೂರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾರಾಣಿ ಅವರು ಕರ್ತವ್ಯಕ್ಕೆ ಹೋದಾಗ ಹಾಗೂ ಕುಟುಂಬದ ಸದಸ್ಯರು ಮನೆಯಲ್ಲಿ ಇಲ್ಲದಿದ್ದಾಗ ಮೇ.21ರಂದು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಹೆಚ್ಚುವರಿ ಎಸ್ಪಿ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.