ಬ್ಯಾಂಕ್ ಖಾತೆಗೆ ಪಾನ್ ನಂಬರ್ ಲಿಂಕ್ ಮಾಡಲು ಹೋಗಿ 89 ಸಾವಿರ ರೂ. ಕಳೆದುಕೊಂಡ ಮಹಿಳೆ
Update: 2021-05-29 22:36 IST
ದಾವಣಗೆರೆ, ಮೇ 29: ಬ್ಯಾಂಕ್ ಖಾತೆಗೆ ಪಾನ್ ನಂಬರ್ ಲಿಂಕ್ ಮಾಡುವುದಾಗಿ ನಂಬಿಸಿ ಯೂಸರ್ ನೇಮ್ ಮತ್ತು ಪಾಸ್‍ವರ್ಡ್ ಪಡೆದುಕೊಂಡು ಮಹಿಳೆಯೊಬ್ಬರ ಖಾತೆಯಿಂದ 89,263 ರೂ. ದೋಚಿದ ಪ್ರಕರಣ ನಗರದಲ್ಲಿ ನಡೆದಿದೆ.
ಸರಸ್ವತಿ ನಗರದ ನಿವಾಸಿಯಾದ ನಂದಾ ನಾಡಿಗೇರ್ ಹಣ ಕಳೆದುಕೊಂಡ ಮಹಿಳೆ. ಮಹಿಳೆಯ ಮೊಬೈಲ್ ನಂಬರ್ ಗೆ ಯಾರೋ ಪಾನ್ ನಂಬರ್ ಲಿಂಕ್ ಮಾಡುವ ಆ್ಯಪ್ ಲಿಂಕ್ ಕಳುಹಿಸಿದ್ದಾರೆ. ಆ್ಯಪ್ ಓಪನ್ ಮಾಡಿ, ಯೂಸರ್ ನೇಮ್ ಹಾಗೂ ಪಾಸ್‍ವರ್ಡ್ ತಿಳಿಸುವಂತೆ ಸೂಚಿಸಿದ್ದಾರೆ. ಅದರಂತೆ ಮಹಿಳೆ ಬ್ಯಾಂಕ್ ಖಾತೆ ಪಾಸ್‍ವರ್ಡ್ ನೀಡಿದ್ದಾರೆ. ನಂತರ ಖಾತೆಯನ್ನು ಪರಿಶೀಲಿಸಿದಾಗ ಹಣ ದೋಚಿರುವುದು ಗೊತ್ತಾಗಿದೆ.
ಈ ಕುರಿತು ದಾವಣಗೆರೆ ನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.