×
Ad

ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ: ಕಾಂಗ್ರೆಸ್ ಟೀಕೆ

Update: 2021-05-30 12:31 IST

ಬೆಂಗಳೂರು, ಮೇ 30: ಆರೋಗ್ಯ ತುರ್ತು ಪರಿಸ್ಥಿತಿಯನ್ನು ಬಿಜೆಪಿ ನಾಯಕರು ಹಣ ದೋಚಲು ಬಳಸಿಕೊಳ್ಳುತ್ತಿರುವುದು ಅತ್ಯಂತ ನೀಚ ಹಾಗೂ ಅಮಾನವೀಯ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

ಕೇಂದ್ರದ ಲಸಿಕೆ ಅನ್ಯಾಯದ ವಿರುದ್ಧ ತುಟಿ ಬಿಚ್ಚದೆ ಕುಳಿತಿದ್ದ ತೇಜಸ್ವಿ ಸೂರ್ಯ ಹಾಗೂ ರವಿ ಸುಬ್ರಮಣ್ಯ ಬಡವರ ವ್ಯಾಕ್ಸಿನ್ ಕಳ್ಳತನ ಮಾಡಿದ್ದರ ಬಗ್ಗೆ ತನಿಖೆ ಇನ್ನೂ ಏಕಿಲ್ಲ ಯಡಿಯೂರಪ್ಪ ಅವರೇ ? ಎಂದು ಪ್ರಶ್ನಿಸಿದೆ

ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ. ಕೊರೋನ ಕಾಲಘಟ್ಟವನ್ನು ಉಭಯ ಸರ್ಕಾರಗಳು ಭರಪೂರ ಲೂಟಿಗೆ ಬಳಸಿಕೊಳ್ಳುತ್ತಿವೆ. ಈ ಹೆಣದ ಮೇಲಿನ ಹಣಕ್ಕಾಗಿಯೇ ಬಿಜೆಪಿಯಲ್ಲಿ ಕಿತ್ತಾಟ ಶುರುವಾಗಿರುವುದು. ಪಿಎಂ ಕೇರ್ಸ್‌ನಿಂದ ಹಿಡಿದು ಔಷಧ ಕಾಳಸಂತೆ, ಲಸಿಕೆ ಬ್ಲಾಕಿಂಗ್‌ವರೆಗೂ ಚಾಚಿವೆ ಇವರ ಬಾಚಿ ತಿನ್ನುವ ಕೈಗಳು ಎಂದು ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News