ತುಮಕೂರು: ಇಲಾಹಿ ಸಿಕಂದರ್ ತಂಡದಿಂದ ಅನಾಥ ಶವಗಳ ಅಂತಿಮ ಸಂಸ್ಕಾರ

Update: 2021-05-30 17:51 GMT

ತುಮಕೂರು, ಮೇ 30: ಕೊರೋನ ಮಹಾಮಾರಿಯಿಂದ ತತ್ತರಿಸಿರುವ ಜನರಿಗೆ ಅನುಕೂಲಕ್ಕಾಗಿ ಮೂರು ತುರ್ತು ವಾಹನ ಮತ್ತು ಆಮ್ಲಜನಕ ಸಾಂದ್ರಕಗಳನ್ನು ನೀಡಿ ಸಹಕರಿಸುತ್ತಿರುವ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಇಲಾಹಿ ಸಿಖಂದರ್ ನೇತೃತ್ವದ ಯುವಜನರ ತಂಡ ಅನಾಥ ಶವಗಳ ಅಂತಿಮಸಂಸ್ಕಾರಕ್ಕೂ ಮುಂದಾಗಿದೆ.

ತುಮಕೂರಿನ ಇಲಾಯಿ ಸಿಖಂದರ್, ಶುಕ್ರವಾರ ಕೋವಿಡ್‌ನಿಂದ ಮೃತಪಟ್ಟ ಚೇಳೂರು ಗ್ರಾಮದ ವ್ಯಕ್ತಿಯೊಬ್ಬರ ಶವವನ್ನು ಹಿಂದೂ ಸಂಪ್ರದಾಯದ ಪ್ರಕಾರ ಅವರ ಜಮೀನಿನಲ್ಲಿ ಮಣ್ಣು ಮಾಡುವ ಮೂಲಕ ತಮ್ಮ ಸೇವಾ ಕಾರ್ಯವನ್ನು ವಿಸ್ತರಿಸಿದ್ದಾರೆ.

ಕೋರೋನ ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಮೇ 23ರಂದು 3 ಆ್ಯಂಬುಲೆನ್ಸ್ ಹಾಗೂ ಅಮ್ಲಜನಕ ಸಾಂದ್ರಕಗಳನ್ನು ನೀಡಿ ನೆರವಾಗಿದ್ದರು.

ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಯಾರೂ ಮುಂದಾಗದೇ ಇದ್ದಾಗ ಚೇಳೂರು ಗ್ರಾಮದ 50 ವರ್ಷದ ವ್ಯಕ್ತಿಯ ಶವಸಂಸ್ಕಾರ ನೆರವೇರಿಸುವ ಮೂಲಕ ಜವಾಬ್ದಾರಿ ನೆರವೇರಿಸಿದ್ದಾರೆ. ಅಗತ್ಯ ಇರುವವರು ಹೆಲ್ಪ್‌ಲೈನ್ ಸಂಖ್ಯೆ: 7411322661 ಗೆ ಕರೆ ಮಾಡುವ ಮೂಲಕ ಉಚಿತ ಸೇವೆ ಪಡೆದುಕೊಳ್ಳುವಂತೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಇಲಾಯಿ ಸಿಖಂದರ್ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News