ಲಾಕ್‍ಡೌನ್ ಪರಿಣಾಮ: ರಾಜ್ಯದ ಅಬಕಾರಿ ಆದಾಯದಲ್ಲಿ ಭಾರೀ ಕುಸಿತ

Update: 2021-05-30 18:04 GMT

ಬೆಂಗಳೂರು, ಮೇ 30: ಕೋವಿಡ್ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸಿರುವ ಲಾಕ್‍ಡೌನ್ ಪರಿಣಾಮವಾಗಿ ರಾಜ್ಯ ಅಬಕಾರಿ ಆದಾಯದಲ್ಲಿ ಕುಸಿತವಾಗಿದೆ ಎಂದು ವರದಿಯಾಗಿದೆ.

ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಸರಕಾರ ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್ ಖರೀದಿಗೆ ಮಾತ್ರ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಮದ್ಯ ಮಾರಾಟ ಅಬಕಾರಿ ಇಲಾಖೆ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಕುಸಿತಗೊಂಡಿದೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರಕಾರಕ್ಕೆ 1,388.16 ಕೋಟಿ ರೂ., ಮಾತ್ರ ಲಭಿಸಿದೆ. ಇನ್ನು ಎಪ್ರಿಲ್ ತಿಂಗಳಿಗೆ ಹೋಲಿಕೆ ಮಾಡುವುದಾದರೆ, 3,593.82 ಕೋಟಿ ಆದಾಯ ಲಭಿಸಿತ್ತು. ಇದರಂತೆ ಈ ತಿಂಗಳು 2,205 ಕೋಟಿ ರೂಪಾಯಿ ಕುಸಿತವಾಗಿದೆ.

ಮೇ3 ರಿಂದ ಮೇ 29ರ ವರೆಗೂ ರಾಜ್ಯದಲ್ಲಿ 39.50 ಲಕ್ಷ ರೂ. ಮೌಲ್ಯದಷ್ಟು ಐಎಂಎಲ್ ಮದ್ಯದ ಮಾರಾಟವಾಗಿದೆ. ಮೇ ತಿಂಗಳಲ್ಲಿ 6.88 ಲಕ್ಷ ರೂ. ಮೌಲ್ಯದಷ್ಟು ಬಿಯರ್ ಮಾರಾಟವಾಗಿದೆ. ಆದರೆ, ಎಪ್ರಿಲ್ ತಿಂಗಳಲ್ಲಿ 39.50 ಲಕ್ಷ ಐಎಂಎಲ್, 32.60 ಲಕ್ಷ ರೂ. ಮೌಲ್ಯದಷ್ಟು ಬಿಯರ್ ಮಾರಾಟವಾಗಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News