ಕೋವಿಡ್ ಪಾಸಿಟಿವಿಸಿ ದರ ಶೇ.5ರೊಳಗೆ ಬರುವವರೆಗೂ ಲಾಕ್‍ಡೌನ್ ಮುಂದುವರಿಸಿ: ಸಿದ್ದರಾಮಯ್ಯ

Update: 2021-05-31 15:40 GMT

ಬೆಂಗಳೂರು, ಮೇ 31: ಕೋವಿಡ್ ಟೆಸ್ಟಿಂಗ್ ಪಾಸಿಟಿವಿಟಿ ರೇಟ್ ಶೇ.5 ರೊಳಗೆ ಬರುವವರೆಗೆ ಕೊರೋನ ಲಾಕ್‍ಡೌನ್ ಮುಂದುವರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ರೇಟ್ ಶೇ. 5ರೊಳಗೆ ಬರುವವರೆಗೆ ಸರಕಾರ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಲಾಕ್‍ಡೌನ್ ಮತ್ತಿತರ ವಿಷಯದಲ್ಲಿ ತಜ್ಞರ ಸಲಹೆಯನ್ನು ಸರಕಾರ ಚಾಚೂತಪ್ಪದೆ ಪಾಲಿಸಬೇಕು. ಎಲ್ಲರಿಗೂ ಕೋವಿಡ್ ಲಸಿಕೆ ಹಾಕುವುದೊಂದೇ ಕೊರೊನ ಸೋಂಕಿನಿಂದ ದೂರ ಇರುವ ಮಾರ್ಗ ಎಂದು ಸಲಹೆ ಮಾಡಿದ್ದಾರೆ.

12 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಎಲ್ಲರಿಗೂ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಬೇಕು. ಡಿಸೆಂಬರ್ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ದೇಶಕ್ಕೆ 216 ಕೋಟಿ ಹಾಗೂ ರಾಜ್ಯಕ್ಕೆ 9 ಕೋಟಿ ಡೋಸ್‍ನಷ್ಟು ಕೋವಿಡ್ ಲಸಿಕೆ ಬೇಕಿದೆ. ಈಗಿನಂತೆ ತೆವಳುತ್ತಾ ಸಾಗಿದರೆ ಎಲ್ಲರಿಗೂ ಲಸಿಕೆ ಹಾಕಲು 3-4 ವರ್ಷಗಳೇ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News