ಕೊಳಕು ಭಾಷೆ 'ಕನ್ನಡ' ಎಂದು ಸರ್ಚ್ ನಲ್ಲಿ ತೋರಿಸಿದ ಗೂಗಲ್

Update: 2021-06-03 09:59 GMT

ವಿಶ್ವದ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಆಗಿರುವ ಗೂಗಲ್ ನಲ್ಲಿ ಗುರುವಾರ Ugliest language in india (ಭಾರತದ ಕೊಳಕು ಭಾಷೆ) ಎಂದು ಹುಡುಕಿದಾಗ 'ಕನ್ನಡ' ಎಂಬ ಉತ್ತರವನ್ನು ವೆಬ್‌ಸೈಟ್ ಒಂದು ನೀಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

debtconsolidationsquad.com ಎಂಬ ವೆಬ್‌ಸೈಟ್ ಕನ್ನಡ ಕೊಳಕು ಭಾಷೆ ಎಂಬ ಉತ್ತರವನ್ನು ನೀಡಿದ್ದು, ಸಾವಿರಾರು ಕನ್ನಡಿಗರು ರಿಪೋರ್ಟ್ ಮಾಡಿದ ಕೆಲವೇ ಸಮಯದಲ್ಲಿ ಗೂಗಲ್ ತನ್ನ ಸರ್ಚ್ ಪುಟದಿಂದ ಈ ವೆಬ್ ಪುಟವನ್ನು ತೆಗೆದುಹಾಕಿದೆ.

ಕೊಳಕು ಭಾಷೆ ಎನ್ನುವ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಎಸಗುವ ಹುನ್ನಾರವೊಂದು ನಡೆದಿದೆ ಎಂದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೂಗಲ್​ನಂತಹ ದೊಡ್ಡ ಸಂಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ ಬೆನ್ನಿಗೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, #Kannada ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಸುಮಾರು 3,150ಕ್ಕೂ ಅಧಿಕ ಮಂದಿ ಟ್ವೀಟ್ ಮಾಡಿ, ಗೂಗಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಗೂಗಲ್ ತನ್ನ ಸರ್ಚ್ ಪುಟದಿಂದ debtconsolidationsquad.com ಎಂಬ ವೆಬ್ ಪುಟವನ್ನೇ ತೆಗೆದುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News