ಲಾಕ್‌ಡೌನ್ ವಿಸ್ತರಿಸುವುದೇ ಆದರೆ ಸಮರ್ಪಕ ಪ್ಯಾಕೇಜ್ ನೀಡಬೇಕು: ಕಾಂಗ್ರೆಸ್ ಒತ್ತಾಯ

Update: 2021-06-03 10:40 GMT

ಬೆಂಗಳೂರು, ಜೂ.3: ಸರಕಾರ ಲಾಕ್‌ಡೌನ್ ವಿಸ್ತರಿಸುವ ಚಿಂತನೆ ನಡೆಸಿದೆ ಎಂದರೆ ಕಳೆದ ಒಂದು ತಿಂಗಳಿಂದ ಲಾಕ್‌ಡೌನ್ ವಿಫಲವಾಗಿದೆ ಎಂದರ್ಥ. ಆಗಿರುವ ಲೋಪದ ಬಗ್ಗೆ ಸರಕಾರ ತಜ್ಞರೊಂದಿಗೆ ವಿಮರ್ಶೆ ನಡೆಸದೆ ತನ್ನ ಮನಸಿಗೆ ತೋಚಿದ್ದನ್ನ ಮಾಡುತ್ತಿದೆ. ವೈದ್ಯಕೀಯ ತಜ್ಞರಷ್ಟೇ ಅಲ್ಲ ಆರ್ಥಿಕ ತಜ್ಞರಲ್ಲಿಯೂ ಲಾಕ್‌ಡೌನ್ ಬಗ್ಗೆ ಚರ್ಚಿಸುವ ಅಗತ್ಯವಿದೆ ಯಡಿಯೂರಪ್ಪ ಅವರೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿಳಿಸಿದೆ.

ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನತೆ ಲಾಕ್‌ಡೌನ್ ವಿಸ್ತರಣೆಯನ್ನು ಭರಿಸುವ ಶಕ್ತಿ ಹೊಂದಿದ್ದರೆಯೇ ಎಂದು ಚಿಂತಿಸಿದ್ದೀರಾ ಯಡಿಯೂರಪ್ಪ ಅವರೇ? ಕೈಗಾರಿಕೆಗಳು, ರೈತರ ಪರಿಸ್ಥಿತಿಯ ಅವಲೋಕನ ನಡೆಸಿದ್ದೀರಾ? ನಿಮ್ಮ ನೆಪಮಾತ್ರದ ಪ್ಯಾಕೇಜ್ ಜನತೆಗೆ ತಲುಪಿದೆಯೇ, ಬದುಕಲು ಅದು ಸಾಲುತ್ತದೆಯೇ? ಇದೆಲ್ಲವನ್ನೂ ಚಿಂತಿಸಬೇಕಲ್ಲವೇ? ಎಂದು ಪ್ರಶ್ನಿಸಿದೆ.

ಸರಕಾರ ಲಾಕ್‌ಡೌನ್ ವಿಸ್ತರಿಸುವುದೇ ಆದರೆ ಕೂಡಲೇ ಸಮರ್ಪಕ ಪ್ಯಾಕೇಜ್ ನೀಡಬೇಕು. ಪ್ರತಿ ಬಡ ಕುಟುಂಬಗಳಿಗೂ ರೇಷನ್ ಕಿಟ್‌ಗಳನ್ನು ಸರಕಾರವೇ ಒದಗಿಸಬೇಕು. ರೈತರ ಬೆಳೆ ಖರೀದಿ ಮಾಡಬೇಕು. ಎಲ್ಲಾ ಅರ್ಹರಿಗೆ ಕನಿಷ್ಠ 10,000 ರೂ ನೀಡಬೇಕು. ಇಲ್ಲದಿದ್ದಲ್ಲಿ ಕೊರೋನಗಿಂತಲೂ ಹೆಚ್ಚು ಹಸಿವು, ಬಡತನ ಜನರನ್ನು ಬಲಿಪಡೆಯುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News