ಜೈಲಲ್ಲಿರುವ ವಿನಯ್ ಕುಲಕರ್ಣಿ ಭೇಟಿಗೆ ಅನುಮತಿ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಡಿಕೆಶಿ

Update: 2021-06-03 11:28 GMT

ಬೆಂಗಳೂರು, ಜೂ.3: ಧಾರವಾಡ ಜಿಪಂ ಸದಸ್ಯ ಯೋಗೇಶ್‍ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅನುಮತಿ ಕೋರಿ ನಗರದ ಜನಪ್ರತಿನಿಧಿಗಳ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಡಿಕೆಶಿ ಅವರು ತನ್ನ ಪರ ವಕೀಲ ಮಂಜುನಾಥ್ ಎಂ.ಆರ್. ಕಡೆಯಿಂದ ಇಮೇಲ್ ಮೂಲಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಭೇಟಿಗೆ ಅನುಮತಿ ನೀಡುವ ಕುರಿತು ಜೈಲಿನ ಅಧಿಕಾರಿಗಳಿಂದ ವರದಿ ಕೇಳಿದೆ. ಸದ್ಯದ ಸಮಯದಲ್ಲಿ ಭೇಟಿ ಮಾಡಲು ಅವಕಾಶ ನೀಡಬಹುದೇ? ಇಲ್ಲವಾದರೆ ಯಾವ ಕಾರಣಕ್ಕೆ ಭೇಟಿ ಸಾಧ್ಯವಿಲ್ಲ? ಈ ಅಂಶಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.

ಜೂ.7ರೊಳಗೆ ಇದಕ್ಕೆ ಉತ್ತರಿಸಲು ನ್ಯಾಯಪೀಠವು ಆದೇಶ ನೀಡಿದೆ. ಅರ್ಜಿ ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದೆ.

ವಿನಯ್ ಕುಲಕರ್ಣಿ ಬಂಧನವಾದ ಬಳಿಕ ಮೊದಲ ಬಾರಿಗೆ ಡಿಕೆಶಿ ಅವರು ಭೇಟಿಗೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News