×
Ad

ನೆಗೆಟಿವ್ ವರದಿ ನೀಡುತ್ತಿದ್ದ ಆರೋಪ: ವೈದ್ಯರು, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

Update: 2021-06-03 19:10 IST

ಬಾಗಲಕೋಟೆ, ಜೂ.3: ಕೋವಿಡ್ ಪಾಸಿಟಿವ್ ಇದ್ದರೂ, ನೆಗೆಟಿವ್ ವರದಿ ನೀಡುತ್ತಿದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ವಿರುದ್ಧ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಳಕಲ್ ತಾಲೂಕಿನ ನಗರದ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಇದ್ದರೂ, ಸೋಂಕಿತರಿಗೆ ನೆಗೆಟಿವ್ ವರದಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಪ್ರಶಾಂತ  ತುಂಬಗಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ವರದಿ ಸಂಗ್ರಹಿಸಿದ್ದರು. ವೈದ್ಯಾಧಿಕಾರಿ ಮಾಹಿತಿ ಸಂಗ್ರಹಿಸಿದಂತೆ ಆಸ್ಪತ್ರೆಯ ವೈದ್ಯ ಮಹಾಂತೇಶ್ ಅಕ್ಕಿ, ಲ್ಯಾಬ್ ಟೆಕ್ನಿಷಿಯನ್ ಸದ್ದಾಮ್, ಐಶ್ವರ್ಯ ಕೋವಿಡ್ ಪಾಸಿಟಿವ್ ಇದ್ದರೂ ನೆಗೆಟಿವ್ ವರದಿ ನೀಡುತ್ತಿರುವುದು ಬೆಳಕಿಗೆ ಬಂದಿತ್ತು. ಇದರಿಂದಾಗಿ ಇಳಕಲ್ ನಗರ ಪೊಲೀಸ್ ಠಾಣೆ ವಿರುದ್ಧ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಇಳಕಲ್ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ಮಹಾಂತೇಶ್ ಅಕ್ಕಿ, ಲ್ಯಾಬ್ ಟೆಕ್ನೀಷಿಯಲ್ ಸದ್ದಾಮ್ ಹಾಗೂ ಐಶ್ವರ್ಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News