ರಾಜ್ಯದಲ್ಲಿ ಒಟ್ಟು 3 ಕೋಟಿ ಕೋವಿಡ್-19 ಪರೀಕ್ಷೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-06-03 16:48 GMT

ಬೆಂಗಳೂರು, ಜೂ.3: ರಾಜ್ಯವೂ 3 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಪೂರೈಸುವ ಮೂಲಕ ಗುರುವಾರ ಮತ್ತೊಂದು ದಾಖಲೆ ಬರೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಗುರುವಾರ ಈ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ ಅವರು, ಕರ್ನಾಟಕವೂ 3 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಪೂರೈಸಲಿದೆ. ರಾಜ್ಯಾದ್ಯಂತ 196 ಕೋವಿಡ್ ಲ್ಯಾಬ್‍ಗಳನ್ನು ಹೊಂದಲಾಗಿದ್ದು, ಈವರೆಗೂ ನಡೆಸಿರುವ ಪರೀಕ್ಷೆಗಳಲ್ಲಿ ಶೇ.82ರಷ್ಟಕ್ಕಿಂತ ಹೆಚ್ಚು ಪರೀಕ್ಷೆಗಳು ಆರ್‍ಟಿ-ಪಿಸಿರ್ ಪರೀಕ್ಷೆ ಆಗಿವೆ. ಈ ಮೈಲಿಗಲ್ಲು ಸಾಧಿಸಿಲು ಶ್ರಮಿಸಿದ ಎಲ್ಲ ಕೊರೋನ ಯೋಧರು ಹಾಗೂ ಲ್ಯಾಬ್ ಸಿಬ್ಬಂದಿಗಳಿಗೆ ಅಭಿನಂದನೆ ಎಂದು ನುಡಿದರು.

ಇನ್ನು, ಜೂನ್ ತಿಂಗಳಿನಲ್ಲಿ ಕೇಂದ್ರ ಸರಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಲಸಿಕೆ ಮತ್ತು ರಾಜ್ಯ ಸರಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಲಸಿಕೆ ಸೇರಿದಂತೆ ಒಟ್ಟು 58.71 ಲಕ್ಷ ಕೋವಿಡ್ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ. ಎಲ್ಲ ಕನ್ನಡಿಗರಿಗೂ ಲಸಿಕೆ ಒದಗಿಸಲು ಕೇಂದ್ರ ಸರಕಾರ ನೀಡುತ್ತಿರುವ ನಿರಂತರ ಸಹಕಾರ ಶ್ಲಾಘನೀಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News