ಕೊಳಕು ಭಾಷೆ ಕನ್ನಡ ಎಂದು ತೋರಿಸಿದ ಗೂಗಲ್ ವಿರುದ್ಧ ಕರವೇ ದೂರು

Update: 2021-06-03 17:52 GMT

ಬೆಂಗಳೂರು, ಜೂ.3: ಕನ್ನಡ ಭಾಷೆಯ ಕುರಿತು ಅವಹೇಳನ ಅಂಶಗಳನ್ನು ಹಂಚಿಕೊಂಡಿರುವ ಗೂಗಲ್ ಕಂಪೆನಿ ವಿರುದ್ಧ ಕಾನೂನುರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರರು ಇಲ್ಲಿನ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಕನ್ನಡವು ದೇಶದ ಕೊಳಕು ಭಾಷೆ ಎಂದು ಗೂಗಲ್‍ನಲ್ಲಿ ತೋರಿಸುತ್ತಿದೆ ಎಂದು ಆರೋಪಿಸಿ ಕರವೇ ಮುಖಂಡ ಪ್ರವೀಣ್ ಶೆಟ್ಟಿ ನೇತೃತ್ವದ ಇಲ್ಲಿನ ಬೆನ್ನಿಗಾನಹಳ್ಳಿ ಬಳಿಯ ಗೂಗಲ್ ಸಂಸ್ಥೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಯಿತು.

ಆನಂತರ, ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News