×
Ad

ಮೈಸೂರನ್ನು ಕೋವಿಡ್ ಮುಕ್ತ ಮಾಡುವುದೇ ನಮ್ಮ ಗುರಿ, ಆರೋಪಗಳಿಗೆ ಉತ್ತರ ಕೊಡುವ ಸಮಯ ಇದಲ್ಲ: ಡಿಸಿ ರೊಹಿಣಿ ಸಿಂಧೂರಿ

Update: 2021-06-04 11:27 IST

ಮೈಸೂರು, ಜು.4: ಜುಲೈ 1ಕ್ಕೆ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆಯೇ ಹೊರತು, ಆರೋಪಗಳಿಗೆ ಉತ್ತರ ಕೊಡುವ ಸಮಯ ಇದಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೊಹಿಣಿ ಸಿಂಧೂರಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯನ್ನು ಕೊರೋನ ಮುಕ್ತ ಮಾಡುವುದೇ ನಮ್ಮ ಗುರಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಪಾಲಿಕೆ ಆಯುಕ್ತರ ಆರೋಪಕ್ಕೆ ನಿನ್ನೆಯೇ ಉತ್ತರ ನೀಡಿದ್ದೇನೆ ಎಂದರು.

ಆಡಳಿತದ ವ್ಯವಸ್ಥೆಯನ್ನು ನಾವೆಲ್ಲರೂ ಅನುಸರಿಸಬೇಕು, ಮಾಧ್ಯಮಗಳ ಮುಂದೆ ಹೋಗುವ ಮೊದಲು ನಮ್ಮ ಮೇಲಿನ ಅಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರಬಹುದಿತ್ತು. ಇಲ್ಲ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬಹುದಿತ್ತು ಎಂದು ಹೇಳಿದರು.

ಸುಮಾರು 12 ಕೋಟಿ ರೂ. ಸಿಎಸ್ಆರ್ ಫಂಡ್ ಹಣವನ್ನು ಮೈಸೂರು ನಗರಕ್ಕೆ ಬಳಸಿಕೊಂಡಿದ್ದಾರೆ. ಆದರೂ ಮೈಸೂರು ನಗರದಲ್ಲಿ ಕೊರೋನ ನಿಯಂತ್ರಣ ಮಾಡಲಾಗಲಿಲ್ಲ. ವೈದ್ಯರ ನಡಿಗೆ ಹಳ್ಳಿಗಳ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಸಿಎಸ್ಆರ್ ಫಂಡ್ ಅಗತ್ಯವಿದೆ ಎಂದು ಹೇಳಿದ್ದೇನೆ. ಬರೀ ನಗರಕ್ಕೆ ಖರ್ಚು ಮಾಡುವುದಾದರೆ ಗ್ರಾಮಾಂತರ ಪ್ರದೇಶಕ್ಕೆ ಏನು ಮಾಡುವುದು. ಹಾಗಾಗಿ ಸಿಎಸ್ ಆರ್ ಫಂಡ್ ಲೆಕ್ಕ ಕೇಳಿದೆ. ಜೊತೆಗೆ ನಾನು ಮಾಡು ಯಾವ ಸಭೆಗಳಿಗೂ ಪಾಲಿಕೆ ಆಯುಕ್ತರು ಸರಿಯಾಗಿ ಬರುತ್ತಿರಲಿಲ್ಲ, ಬಂದರೂ ಸಮರ್ಪಕ ಮಾಹಿತಿ ಕೊಡುತ್ತಿರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದೇ ತಪ್ಪಾಗಿದೆ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News