ಕಾಳ ಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಮಾರಾಟ: ಮೂವರ ಬಂಧನ

Update: 2021-06-04 16:47 GMT

ಹುಬ್ಬಳ್ಳಿ, ಜೂ.4: ಬ್ಲ್ಯಾಕ್ ಫಂಗಸ್ ಸೋಂಕಿತ ರೋಗಿಗಳಿಗೆ ನೀಡಲಾಗುವ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಾರುಕಟ್ಟೆಯಲ್ಲಿ 3,400 ಇದ್ದ ಇಂಜೆಕ್ಷನ್ ಅನ್ನು 20 ಸಾವಿರದಿಂದ 25 ಸಾವಿರದ ತನಕ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಸಗಿ ಹೊಟೇಲ್‍ವೊಂದರ ಸಮೀಪ ಇಂಜೆಕ್ಷನ್ ಖರೀದಿ ಮಾಡುವ ನೆಪದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News