ಕೋವಿಡ್19: ರಾಜ್ಯದಲ್ಲಿಂದು 13,800 ಪ್ರಕರಣಗಳು ದೃಢ, 365 ಸೋಂಕಿತರು ಸಾವು

Update: 2021-06-05 16:12 GMT

ಬೆಂಗಳೂರು, ಜೂ.5: ರಾಜ್ಯದಲ್ಲಿ ಶನಿವಾರ 13,800 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 365 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು  26,83,314 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ 31,260 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 2,68,275 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

365 ಮಂದಿ ಸಾವು: ಬಳ್ಳಾರಿ 9, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 206, ಬೀದರ್ 1, ಚಾಮರಾಜನಗರ 6, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 1, ದಕ್ಷಿಣಕನ್ನಡ 8, ದಾವಣಗೆರೆ 4, ಧಾರವಾಡ 8, ಗದಗ 4, ಹಾಸನ 8, ಹಾವೇರಿ 6, ಕಲಬುರಗಿ 1, ಕೊಡಗು 2, ಕೋಲಾರ 10, ಕೊಪ್ಪಳ 5, ಮಂಡ್ಯ 5, ಮೈಸೂರು 22, ರಾಯಚೂರು 4, ರಾಮನಗರ 1, ಶಿವಮೊಗ್ಗ 9, ತುಮಕೂರು 4, ಉಡುಪಿ 1, ಉತ್ತರಕನ್ನಡ 6, ವಿಜಯಪುರ 4 ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶನಿವಾರ 13,800 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 175, ಬಳ್ಳಾರಿ 345, ಬೆಳಗಾವಿ 847, ಬೆಂಗಳೂರು ಗ್ರಾಮಾಂತರ 326, ಬೆಂಗಳೂರು ನಗರ 2686, ಬೀದರ್ 23, ಚಾಮರಾಜನಗರ 340, ಚಿಕ್ಕಬಳ್ಳಾಪುರ 432, ಚಿಕ್ಕಮಗಳೂರು 378, ಚಿತ್ರದುರ್ಗ449, ದಕ್ಷಿಣಕನ್ನಡ 714, ದಾವಣಗೆರೆ 529, ಧಾರವಾಡ 247, ಗದಗ 152, ಹಾಸನ 568, ಹಾವೇರಿ 88, ಕಲಬುರಗಿ 69, ಕೊಡಗು 255, ಕೋಲಾರ 424, ಕೊಪ್ಪಳ 279, ಮಂಡ್ಯ 562, ಮೈಸೂರು 1,155, ರಾಯಚೂರು  110, ರಾಮನಗರ 57, ಶಿವಮೊಗ್ಗ 710, ತುಮಕೂರು 695, ಉಡುಪಿ 552, ಉತ್ತರಕನ್ನಡ 325, ವಿಜಯಪುರ 254, ಯಾದಗಿರಿ ಜಿಲ್ಲೆಯಲ್ಲಿ 54 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 206 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 2,686 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 206 ಸೋಂಕಿತರು ಮೃತಪಟ್ಟಿದ್ದಾರೆ. ಹಾಗೂ 8,852 ಮಂದಿ ಗುಣಮುಖರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ 14,688 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿದಂತೆ ಒಟ್ಟು 1,24,807 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News