65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

Update: 2021-06-07 15:53 GMT

ಬೆಂಗಳೂರು, ಜೂ. 7: `ನಾವು ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ಹೊಸದಾಗಿ ಸಹಿ ಸಂಗ್ರಹ ಮಾಡಿದ್ದೇವೆ, ಇದರಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರ ಸಹಿ ಇಲ್ಲ, ಯಾವ ಸಚಿವರ ಸಹಿಯೂ ಇಲ್ಲ. ಕೇವಲ ಶಾಸಕರ ಸಹಿ ಮಾತ್ರ ಇದೆ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದಿಲ್ಲಿ ಶಾಸಕ ಬೆಲ್ಲದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಳಿಕ ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, `ಯಾವುದೇ ಸಹಿ ಸಂಗ್ರಹಿಸುತ್ತಿಲ್ಲ ಎಂಬ ಹೇಳಿಕೆ ನೀಡಿರುವ ಶಾಸಕರು ದೊಡ್ಡವರು. ಅವರು ಮುಖ್ಯಮಂತ್ರಿ ರೇಸ್‍ನಲ್ಲಿ ಇರುವವರು. ಅವರ ಬಗ್ಗೆ ನಾವು ಪ್ರತಿಕ್ರಿಯೆ ನೀಡಿದರೆ ಸಣ್ಣವರಾಗುತ್ತೇವೆ. ಅವರು ಸಿಎಂ ಆಗುವವರೆಂದು ಬಿಂಬಿಸಿಕೊಳ್ಳಲಿ. ನಾನು ಮುಂದಿನ ಸಿಎಂ ಎಂದು ಜೇಬಿನಲ್ಲಿ ಚೀಟಿ ಇಟ್ಟುಕೊಂಡು ಓಡಾಡುವವರ ಹೆಸರು ಹೇಳಲಿಲ್ಲ. ಅವರೇಕೆ ನಮ್ಮ ವಿಚಾರಕ್ಕೆ ಬರುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರವಿಂದ ಬೆಲ್ಲದ್ ಅವರು ತಮ್ಮ ಪಕ್ಕದ ಕ್ಷೇತ್ರ ಗೆಲ್ಲಿಸಿಕೊಂಡು ಬರಲಿ ನೋಡೋಣ. ಅವರು ಗೆಲ್ಲಿಸಿಕೊಂಡು ಬಂದರೆ ಅವರು ಸಿಎಂ ಅಭ್ಯರ್ಥಿ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಯಡಿಯೂರಪ್ಪನವರಿಗೆ ಹೈಕಮಾಂಡ್ ಬೆಂಬಲವಿದೆ. ಬೆಲ್ಲದ್ ಅವರು ನಮ್ಮ ಶಾಸಕರ ಸಹಿ ಪತ್ರದಲ್ಲಿ ಇಲ್ಲ. ಇದೀಗ ನಾವು ಹೊಸದಾಗಿ ಶಾಸಕರ ಸಹಿ ಸಂಗ್ರಹ ಮಾಡಿದ್ದೇವೆ. ಆ ಮೂಲಕ ನಾವು ಯಾರನ್ನೂ ಬ್ಲಾಕ್ಮೇಲ್ ಮಾಡುತ್ತಿಲ್ಲ. 65 ಮಂದಿ ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ. ಆ ಪ್ರತಿ ನನ್ನ ಬಳಿ ಇದೆ' ಎಂದು ರೇಣುಕಾಚಾರ್ಯ ಎಲ್ಲ ಊಹಾಪೋಹಾಗಳಿಗೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News