×
Ad

ಮೈಸೂರು: ಪೊಲೀಸರೊಂದಿಗೆ ರಂಪಾಟ ಮಾಡಿದ ಯುವತಿ; ವೀಡಿಯೋ ವೈರಲ್

Update: 2021-06-08 21:26 IST

ಮೈಸೂರು,ಜೂ.8: ಲಾಕ್ ಡೌನ್ ಹಿನ್ನಲೆಯಲ್ಲಿ ಪೊಲೀಸರು ರಸ್ತೆ ಬಂದ್ ಮಾಡಿ ಬ್ಯಾರಿಕೇಡ್ ಹಾಕಿದ್ದರು ಯುವತಿ ಈ ರಸ್ತೆಯಲ್ಲೇ ಹೋಗಬೇಕು ಎಂದು ಪೊಲೀಸರೊಂದಿಗೆ ರಂಪಾಟ ನಡೆಸಿರುವ ವೀಡಿಯೋ ವೈರಲ್ ಆಗಿದೆ.

ನಗರದ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಾಲ್ಮೀಕಿ ರಸ್ತೆಯಲ್ಲಿ ಮಂಗಳವಾರ ಬೈಕ್‍ನಲ್ಲಿ ಬಂದ ಯುವತಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದರೂ ಈ ರಸ್ತೆಯಲ್ಲೇ ಹೋಗಬೇಕು ಎಂದು ಮಹಿಳಾ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪೊಲೀಸರು ಪಕ್ಕದ ರಸ್ತೆಯಲ್ಲಿ ಹೋಗುವಂತೆ ತಾಳ್ಮೆಯಿಂದ ಹೇಳಿದರೂ ಬಗ್ಗದ ಯುವತಿ, ನಾನು ಎಎಸ್‍ಐ ಪತ್ನಿ. ನಮ್ಮ ಯಜಮಾನರಿಗೆ ಕಾಲ್ ಮಾಡಲೇ ಎಂದು ಬೆದರಿಸಿದ್ದಾರೆ.

ಪೊಲೀಸರು ಬುದ್ಧಿವಾದ ಹೇಳಿದರೂ ಕೇಳದ ಯುವತಿ ರಂಪಾಟ ಮಾಡಿದ್ದು, ಈ ವೇಳೆ ಯುವತಿ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ನಂತರ ಪೊಲೀಸರು ಮಹಿಳೆಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News