ರಾಜ್ಯದಲ್ಲಿ ಮುಂದಿನ 2-3 ದಿನ ಮುಂಗಾರು ದುರ್ಬಲ: ಹವಾಮಾನ ಇಲಾಖೆ

Update: 2021-06-08 16:02 GMT

ಬೆಂಗಳೂರು, ಜೂ.8: ತೇವಾಂಶ ಕೊರತೆ ಹಾಗೂ ಗಾಳಿಯ ವೇಗ ಇಲ್ಲದಿರುವುದರಿಂದ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ರಾಜ್ಯದಲ್ಲಿ ಮುಂದಿನ ಎರಡ್ಮೂರು ದಿನ ಮಳೆ ಪ್ರಮಾಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ವಾಡಿಕೆಯಂತೆ ಆಗಮಿಸಿದ ಮುಂಗಾರು ಈಗಾಗಲೇ ರಾಜ್ಯಾದ್ಯಂತ ವ್ಯಾಪಿಸಿದೆ. ಸದ್ಯ ಮಳೆ ಪ್ರಮಾಣ ತಗ್ಗಿದ್ದರೂ ಜೂ.11ರಿಂದ ಚುರುಕು ಪಡೆದುಕೊಳ್ಳಲಿದೆ.

ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ 72 ಗಂಟೆ ಸಾಧಾರಣ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ.11, 12ರಂದು ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಬೆಂಗಳೂರು, ಬೆಂ.ಗ್ರಾಮಾಂತರದಲ್ಲಿ ಜೂ.12ರಂದು ವ್ಯಾಪಕ ಮಳೆಯಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News