×
Ad

ಅರಣ್ಯದಲ್ಲಿ ಕೋತಿಗಳಿಗೆ ಆಹಾರ, ನೆಲೆ ಕಲ್ಪಿಸಲು ಯೋಜನೆ ರೂಪಿಸಿ: ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ

Update: 2021-06-08 21:35 IST

ಬೆಂಗಳೂರು, ಜೂ.8: ಪ್ರಾಣಿಗಳ ವಸತಿಯನ್ನು ಜನ ಅತಿಕ್ರಮಿಸುತ್ತಿರುವುದರಿಂದ ಕೋತಿಗಳು ಜನ ವಸತಿಯನ್ನು ಪ್ರವೇಶಿಸುವುದು ಅಚ್ಚರಿ ಮೂಡಿಸುವುದಿಲ್ಲ ಎಂದಿರುವ ಹೈಕೋರ್ಟ್, ಅರಣ್ಯದಲ್ಲಿ ಕೋತಿಗಳಿಗೆ ಆಹಾರ ಮತ್ತು ನೆಲೆ ಕಲ್ಪಿಸಲು ಯೋಜನೆ ರೂಪಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ.  

ಮಂಗಗಳಿಗೆ ಅರಣ್ಯಗಳಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಕೋರಿ ವಕೀಲ ರಾಧಾನಂದನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ. 

ಬೆಂಗಳೂರು ಬೆಳೆಯುತ್ತಿರುವ ವೇಗ ಮಂಗಗಳಂತಹ ಜೀವಿಗಳಿಗೆ ಸಹಜವಾಗಿ ತಮ್ಮ ಆವಾಸ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದು, ಪ್ರತ್ಯೇಕ ವಸತಿ ರೂಪಿಸುವ ಬಗ್ಗೆ ತನ್ನ ನಿಲುವು ತಿಳಿಸಲು ನ್ಯಾಯಪೀಠವು ಅರಣ್ಯ ಇಲಾಖೆಗೆ ಸೂಚಿಸಿ, ಜು.12ಕ್ಕೆ ವಿಚಾರಣೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News