ಮೈಸೂರು ವಿವಿ ಉತ್ತರ ಪತ್ರಿಕೆ ಹಗರಣದಲ್ಲಿ ಕರ್ತವ್ಯ ಲೋಪ: ಇನ್‍ಸ್ಪೆಕ್ಟರ್ ಸೇರಿ ಆರು ಮಂದಿ ಅಮಾನತು

Update: 2021-06-10 15:34 GMT

ಮೈಸೂರು,ಜೂ.10:  ಮೈಸೂರು ವಿಶ್ವವಿದ್ಯಾನಿಲಯದ ಉತ್ತರ ಪತ್ರಿಕೆ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳದೆ ಕರ್ತವ್ಯಲೋಪ ಎಸಗಿರುವ ಮಂಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಆರು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ನಗರದಲ್ಲಿ ಗುರುವಾರಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ವಿವಿಯ ನೌಕರರಾದ ನಿಸಾರ್ ಅಹಮದ್, ರಾಕೇಶ್, ಚಂದನ ಮತ್ತು ಚೇತನ್ ಎಂಬುವವರು ಎಪ್ರಿಲ್ 21 ರಂದು ಲಾಡ್ಜ್ ನಲ್ಲಿ ಕುಳಿತು ಮೈಸೂರು ವಿಶ್ವವಿದ್ಯಾನಿಲಯದ ಬಿಸ್ಸಿ ಕೆಮಿಸ್ಟ್ರಿ ಪರೀಕ್ಷೆಗೆ ಉತ್ತರ ಸಿದ್ಧ ಮಾಡುತ್ತಿದ್ದರು. ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಮಂಡಿ ಠಾಣೆ ಇನ್ಸ್ ಪೆಕ್ಟರ್ ನಾರಾಯಣಸ್ವಾಮಿ ತಂಡ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದೆ ಠಾಣೆಗೆ ಕರೆಸಿ ವಿಚಾರಣೆ ಮಾಡಿ ನಂತರ ಬಿಟ್ಟು ಕಳುಹಿಸಿದ್ದರು. ಇಂತಹ ಗಂಭೀರ ವಿಚಾರದಲ್ಲಿ ಕ್ರಮವಹಿಸದೆ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ ಇವರ ಮೇಲೆ ಎಫ್ಐಆರ್ ದಾಖಲು ಮಾಡಿ ಅಮಾನತುಗೊಳಿಸಲಾಗಿದೆ ಎಂದು ಚಂದ್ರಗುಪ್ತ ತಿಳಿಸಿದರು.

ಈ ಸಂಬಂಧ ತನಿಖಾಧಿಕಾರಿಯನ್ನು ನೇಮಿಸಿ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಕರಣ ದಾಖಲಾಗುತ್ತಿದ್ದಂತೆಯೇ ಇನ್‍ಸ್ಪೆಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಇತರೆ ಆರೋಪಿಗಳು ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News