ರಾಜ್ಯದಲ್ಲಿ ಶನಿವಾರ 9,785 ಕೋವಿಡ್ ಪ್ರಕರಣ ದೃಢ, 144 ಸೋಂಕಿತರು ಸಾವು

Update: 2021-06-12 14:46 GMT

ಬೆಂಗಳೂರು, ಜೂ.12: ರಾಜ್ಯದಲ್ಲಿ ಶನಿವಾರ 9,785 ಪ್ರಕರಣಗಳು ದಾಖಲಾಗಿದ್ದು, 144 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 27,57,324 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 32,788 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 1,91,796 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

144 ಮಂದಿ ಸಾವು: ಬಳ್ಳಾರಿ 9, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 8, ಬೆಂಗಳೂರು ನಗರ 21, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 3, ಚಿತ್ರದುರ್ಗ 3, ದಕ್ಷಿಣಕನ್ನಡ 4, ದಾವಣಗೆರೆ 6, ಧಾರವಾಡ 10, ಗದಗ 2, ಹಾಸನ 8, ಹಾವೇರಿ 5, ಕಲಬುರಗಿ 5, ಕೊಡಗು 2, ಕೋಲಾರ 2, ಮಂಡ್ಯ 1, ಮೈಸೂರು 20, ಶಿವಮೊಗ್ಗ 6, ತುಮಕೂರು 5, ಉಡುಪಿ 2, ಉತ್ತರಕನ್ನಡ 2, ವಿಜಯಪುರ 3  ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶನಿವಾರ 9,785 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 70, ಬಳ್ಳಾರಿ 337, ಬೆಳಗಾವಿ 443, ಬೆಂಗಳೂರು ಗ್ರಾಮಾಂತರ 242, ಬೆಂಗಳೂರು ನಗರ 2,454, ಬೀದರ್ 30, ಚಾಮರಾಜನಗರ 176, ಚಿಕ್ಕಬಳ್ಳಾಪುರ 273, ಚಿಕ್ಕಮಗಳೂರು 342, ಚಿತ್ರದುರ್ಗ156, ದಕ್ಷಿಣ ಕನ್ನಡ 618, ದಾವಣಗೆರೆ 372, ಧಾರವಾಡ 212, ಗದಗ 60, ಹಾಸನ 624, ಹಾವೇರಿ 65, ಕಲಬುರಗಿ 60, ಕೊಡಗು 194, ಕೋಲಾರ 193, ಕೊಪ್ಪಳ 127, ಮಂಡ್ಯ 320, ಮೈಸೂರು 482, ರಾಯಚೂರು  59, ರಾಮನಗರ 32, ಶಿವಮೊಗ್ಗ 715, ತುಮಕೂರು 440, ಉಡುಪಿ 263, ಉತ್ತರಕನ್ನಡ 229, ವಿಜಯಪುರ 188, ಯಾದಗಿರಿಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News