×
Ad

ಜೂ.21ರಿಂದ ಎರಡನೇ ಹಂತದ ಅನ್‍ಲಾಕ್‍ಗೆ ರಾಜ್ಯ ಸರಕಾರ ನಿರ್ಧಾರ

Update: 2021-06-15 19:37 IST

ಬೆಂಗಳೂರು, ಜೂ.15: ಕೊರೋನ ಸೋಂಕನ್ನು ನಿಯಂತ್ರಿಸಲು ಹೇರಲಾಗಿದ್ದ ಲಾಕ್‍ಡೌನ್‍ಗೆ ಸಂಬಂಧಿಸಿದ ಮೊದಲ ಹಂತದ ಅನ್‍ಲಾಕ್ ಜೂ.14ರಿಂದ ಜಾರಿಗೆ ಬಂದಿದ್ದು, ಇದೀನ ಕೋವಿಡ್ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆ ಆಧರಿಸಿ ಜೂ.21ರಿಂದ ಎರಡನೆ ಹಂತದ ಅನ್‍ಲಾಕ್ ಘೋಷಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಜೂನ್ 21ರಿಂದ ಹೊಟೇಲ್, ಮಾಲ್, ಸಣ್ಣ ಸಣ್ಣ ಮಾರುಕಟ್ಟೆಗಳು, ಸಲೂನ್‍ಗಳು, ಮದುವೆ ಸಮಾರಂಭಗಳು(50 ಜನರಿಗೆ ಸೀಮಿತ), ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲ ಬಗೆಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲು ಸರಕಾರ ಉದ್ದೇಶಿಸಿದೆ.

ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಸೀಮಿತಗೊಳಿಸಿ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‍ಗಳಲ್ಲಿ ಶೇ.50ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡುವುದು, ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಸಂಚಾರಕ್ಕೂ ಅವಕಾಶ ನೀಡಲು ಸರಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಆದರೆ, ಚಲನಚಿತ್ರ ಮಂದಿರಗಳು, ಪಬ್, ಬಾರ್, ಜಿಮ್, ಈಜುಕೊಳ, ಕ್ರೀಡಾಂಗಣಗಳನ್ನು ತೆರೆಯಲು ಇನ್ನಷ್ಟು ಸಮಯ ಬೇಕಾಗಬಹುದು. ಮೂರನೆ ಹಂತದಲ್ಲಿ ಈ ಚಟುವಟಿಕೆಗಳಿಗೆ ಅವಕಾಶಗಳು ನೀಡಲು ಸರಕಾರ ನಿರ್ಧರಿಸಿದೆ. ಜೂ.19ರಂದು ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News