ಮೈಸೂರು: ಅಂಗಗಳ ಕಸಿಗೆ ಒಳಗಾಗಿದ್ದ ಮಹಿಳೆಗೆ ಗಂಡು ಮಗು ಜನನ

Update: 2021-06-15 17:27 GMT

ಮೈಸೂರು,ಜೂ.15: ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಅಂಗಗಳ ಕಸಿಗೆ ಒಳಗಾಗಿದ್ದ 35 ವರ್ಷದ ಮಹಿಳೆಯೋರ್ವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಅಂಗಾಂಗ ವೈಫಲ್ಯದಿಂದ ಬಳಲುವವರಲ್ಲಿ ಭರವಸೆ ಮೂಡಿಸಿದೆ.

ದೇಶದಲ್ಲಿ ಇಂತಹ ಒಂದು ಪ್ರಕರಣ ಇದೇ ಮೊದಲಾಗಿದೆ. ಬಾಲ್ಯದಿಂದಲೇ ಮಧುಮೇಹಕ್ಕೆ ಒಳಗಾಗಿದ್ದ  ಮಹಿಳೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ)ಯಿಂದ ಬಳಲುತ್ತಿದ್ದರು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಇವರಿಗೆ 3 ವರ್ಷದ ಹಿಂದೆ ಏಕಕಾಲಕ್ಕೆ ಮೇದೋಜಿರಕ ಹಾಗೂ ಮೂತ್ರಪಿಂಡಗಳನ್ನು ಕಸಿ (ಎಸ್ಪಿಕೆಟಿ) ಮಾಡಲಾಗಿತ್ತು. ಇದೀಗ ಇವರ ಮಗುವಿಗೆ ಬೆಳಕು ಎಂದು ಹೆಸರಿಡಲಾಗಿದೆ.

ಕಸಿ ಶಸ್ತ್ರ ಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್ ರಾಘವಯ್ಯ, ಸ್ತ್ರೀ ರೋಗ ತಜ್ಞರಾದ ಡಾ.ಬಿ.ಪಿ.ಅಂಜಲಿ, ಅರವಳಿಕೆ ತಜ್ಞರಾದ ಡಾ.ಅಂದ್ರಿತಾ ಮುಖರ್ಜಿ ಈ ಚಿಕಿತ್ಸಾ ತಂಡದಲ್ಲಿದ್ದರು ಎಂದು ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೇಶ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News