ಮೊದಲ ಸಂಬಳವನ್ನು ಬಡವರ ಹಸಿವು ನೀಗಿಸಲು ಮೀಸಲಿಟ್ಟ ಸೋಮವಾರಪೇಟೆಯ ಯುವಕ

Update: 2021-06-15 18:15 GMT

ಮಡಿಕೇರಿ, ಜೂ.15: ಸ್ವಂತ ದುಡಿಮೆಯ ಆದಾಯವನ್ನು ಸಮಾಜ ಸೇವೆಗೆ ಮೀಸಲಿಡುವ ಮಾದರಿ ಜನ ವಿರಳವಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ ಯುವಕ ತನ್ನ ಪ್ರಥಮ ಸಂಬಳವನ್ನೇ ಬಡವರ ಹಸಿವು ನೀಗಿಸುವುದಕ್ಕಾಗಿ ಮೀಸಲಿಟ್ಟಿದ್ದಾರೆ.

ಕೋವಿಡ್ ಲಾಕ್‍ಡೌನ್ ನಿಂದಾಗಿ ಎಲ್ಲರಂತೆ ಮಂಗಳಮುಖಿಯರು ಕೂಡ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಕುಶಾಲನಗರದಲ್ಲಿ ವಾಸವಿರುವ ಮಂಗಳಮುಖಿ ದೀಕ್ಷ ಎಂಬುವವರ ಸಂಕಷ್ಟವನ್ನು ಅರಿತ ಸೋಮವಾರಪೇಟೆಯ ಯುವಕ ಎಸ್.ಎಂ.ಧನುಷ್ ತಮ್ಮ ಮೊದಲ ಸಂಬಳದಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟಿದ್ದಾರೆ.

ಇಂಜಿನಿಯರಿಂಗ್ ಮಾಡಿರುವ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇನ್ನು ಮುಂದೆಯೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. 

ಧನುಷ್ ಅವರು ಪತ್ರಕರ್ತ ಎಸ್.ಮಹೇಶ್ ಹಾಗೂ ಸಮಾಜ ಸೇವಕಿ ಗೀತಾಂಜಲಿ ಅವರ ಪುತ್ರ.

ಕಿಟ್ ವಿತರಿಸುವ ಸಂದರ್ಭ ಎಸ್.ಮಹೇಶ್, ಮೃತ್ಯುಂಜಯ, ಯುವರಾಜ, ಯೋಗೇಶ್ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News