ಲಾಕ್​ಡೌನ್​ ವೇಳೆ ಬೀದಿ ನಾಯಿಗಳಿಗೆ ಮಾಂಸದೂಟಕ್ಕೆ 15 ಲಕ್ಷ ರೂ. ಖರ್ಚು: ಬಿಬಿಎಂಪಿ

Update: 2021-06-16 13:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.16: ಲಾಕ್‍ಡೌನ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ 15 ಲಕ್ಷ ರೂ. ವೆಚ್ಚದಲ್ಲಿ ಮಾಂಸದೂಟ ಹಾಕಲಾಗಿದೆ. ಹಾಗೂ ಅನಾಥ ಹಸುಗಳಿಗೆ 3 ಲಕ್ಷ ರೂ. ವೆಚ್ಚದಲ್ಲಿ ಮೇವನ್ನು ಹಾಕಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಬೆಂಗಳೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿದ್ದು, ಅವುಗಳಿಗೆ ದಿನಕ್ಕೆ 250 ಗ್ರಾಂ ಬೇಯಿಸಿದ ಮಾಂಸದಂತೆ ಊಟ ಒದಗಿಸಲಾಗಿದೆ. ಒಟ್ಟು ಮೂರು ಲಕ್ಷ ನಾಯಿಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಆಹಾರ ನೀಡಿದ ಮೊತ್ತ 15 ಲಕ್ಷ ರೂಪಾಯಿ ಆಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಟ್ಟು 800ಕ್ಕೂ ಹೆಚ್ಚು ಅನಾಥ ಹಸುಗಳಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಅವುಗಳಿಗೆ 3 ಲಕ್ಷ ರೂ.ವೆಚ್ಚದಲ್ಲಿ ಮೇವು ಒದಗಿಸಲಾಗಿದೆ. ಕೆಲವೆಡೆ ಖಾಸಗಿಯವರ ಸಹಕಾರದೊಂದಿಗೆ ಹಸು ಹಾಗೂ ನಾಯಿಗಳಿಗೆ ಆಹಾರ ಒದಗಿಸಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News