ಈ ಬಾರಿಯೂ ಮನೆಯಿಂದಲೇ ಯೋಗ ಆಚರಿಸಿ: ಮುಖ್ಯಮಂತ್ರಿ ಯಡಿಯೂರಪ್ಪ ಕರೆ

Update: 2021-06-16 18:20 GMT

ಬೆಂಗಳೂರು, ಜೂ.16: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಮನೆಯಿಂದಲೇ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಬುಧವಾರ ವಿಡಿಯೊ ಸಂವಾದ ಮೂಲಕ ಪ್ರತಿಕ್ರಿಯಿಸಿದ ಅವರು, ಜೂ.21ರಂದು ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವಂತೆ ಈಗಾಗಲೇ ಕೇಂದ್ರ ಸರಕಾರವು ಘೋಷಣೆ ಮಾಡಿದ್ದು, ಎಂದಿನಂತೆ ಈ ಬಾರಿಯೂ ರಾಜ್ಯದೆಲ್ಲೆಡೆ ಉತ್ಸಹದಿಂದ ಆಚರಣೆ ಮಾಡಲಾಗುವುದು ಎಂದರು.

ಕೋವಿಡ್ ಪರಿಣಾಮವಾಗಿ ಕಳೆದ ವರ್ಷವೂ ಆನ್‍ಲೈನ್ ಮೂಲಕ ಕೇಂದ್ರದ ಆಯುಷ್ ಇಲಾಖೆ ಅಡಿಯಲ್ಲಿ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮನೆಯಲ್ಲಿಯೇ ಆಚರಿಸಲಾಯಿತು. ಈ ಬಾರಿಯೂ ಇದೇ ಮಾದರಿಯಲ್ಲಿ ಆಚರಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಯೋಗ ಮತ್ತು ಪ್ರಾಣಾಯಾಮವೂ ಕೋವಿಡ್ ನಂತರ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿ ಆಗಿದ್ದು, ಮಾನಸಿಕ ಆರೋಗ್ಯಕ್ಕೂ ಪೂರಕವಾಗಿದೆ. ಇನ್ನು, ಆಯುಷ್ ಇಲಾಖೆಯಡಿ ನಡೆಯುವ ಜೂ.21ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಯಡಿಯೂರಪ್ಪ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News