ರಾಜಭವನ ಉದ್ಯಾನ ನಿರ್ವಹಣೆಗೆ 3 ಕೋಟಿ ರೂ. ದುಂದು ವೆಚ್ಚ: ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್

Update: 2021-06-17 18:19 GMT

ಬೆಳಗಾವಿ, ಜೂ.17: ರಾಜಭವನದ ಉದ್ಯಾನ ನಿರ್ವಹಣೆಗೆ 3.27 ಕೋಟಿ ರೂ.ಗಳ ದುಂದು ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ದೂರಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ತೆರಿಗೆ ಹಣದಲ್ಲಿ ರಾಜ್ಯದ ರಾಜ್ಯಪಾಲರು ದರ್ಬಾರ್ ನಡೆಸುತ್ತಿದ್ದು, ರಾಜಭವನದ ಉದ್ಯಾನ ನಿರ್ವಹಣೆಗೆ 2014ರಿಂದ 2017ರ ಅವಧಿಯಲ್ಲಿ 3 ಕೋಟಿ 27 ಲಕ್ಷ ರೂ.ಗಳ ದುಂದು ವೆಚ್ಚ ಮಾಡಲಾಗಿದೆ ಎಂದರು.

ರಾಜ್ಯಪಾಲರು ಸಾರ್ವಜನಿಕರ ತೆರಿಗೆ ಹಣವನ್ನು ಐಷಾರಾಮಿ ಜೀವನ ನಡೆಸಲು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ ಎಂದ ಅವರು, ರಾಜಭವನದ ಡೈನಿಂಗ್ ಹಾಲ್, ಪ್ರಧಾನ ಕಚೇರಿ, ಗಣ್ಯ ವ್ಯಕ್ತಿಗಳ ಕೊಠಡಿಗಳಲ್ಲಿ ಅಲಂಕಾರಕ್ಕಾಗಿ ಅವಶ್ಯ ಇರುವ ಬಿಡಿ ಹೂಗಳನ್ನು ಖರೀದಿಸಲು ಬೇಕಾಬಿಟ್ಟಿ ಹಣ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.

ಅಲ್ಲದೆ, 2014ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡ ವಜೂಭಾಯಿ ವಾಲಾ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಯಾರಿಗೂ ಭೇಟಿಯಾಗಲು ಅವಕಾಶ ನೀಡದೇ ಇದ್ದರೂ ಸಾರ್ವಜನಿಕರ ತೆರಿಗೆ ಹಣದಲ್ಲಿ ವ್ಯಯಿಸಿದ್ದಾರೆ. ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಅವರು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News