ಬಿಜೆಪಿಯ ಹಗರಣದ ಹೆಗ್ಗಣಗಳನ್ನು ಬಿಜೆಪಿಗರೇ ಎಳೆದು ಹೊರಬಿಡುತ್ತಿದ್ದಾರೆ: ವಿಶ್ವನಾಥ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಲೇವಡಿ

Update: 2021-06-18 06:58 GMT

ಬೆಂಗಳೂರು, ಜೂ. 18: ಭದ್ರಾ ಮೇಲ್ದಂಡೆ ಕಿಕ್ ಬ್ಯಾಕ್, ಫೋನ್ ಕದ್ದಾಲಿಕೆ, ಸಿಎಂ ಕುಟುಂಬ ಹಸ್ತಕ್ಷೇಪ, 20 ಸಾವಿರ ಕೋಟಿ ಹಗರಣ, ಆಪರೇಷನ್ ಕಮಲ ಹಗರಣ #BJPvsBJP ಕಿತ್ತಾಟದಲ್ಲಿ ಬಿಜೆಪಿಯ ಬಿಲದಿಂದ ಒಂದೊಂದೇ ಹಗರಣದ ಹೆಗ್ಗಣಗಳನ್ನು ಬಿಜೆಪಿಗರೇ ಎಳೆದು ಹೊರಬಿಡುತ್ತಿದ್ದಾರೆ! ಈ ಬಿಜೆಪಿ ಸರ್ಕಾರ "ಹಗರಣಗಳ ಕೂಪ, ಕರ್ನಾಟಕಕ್ಕೆ ಶಾಪ" ಎಂದು ರಾಜ್ಯ ಕಾಂಗ್ರೆಸ್ ಎಚ್.ವಿಶ್ವನಾಥ್ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 20 ಸಾವಿರ ಕೋಟಿಯ #VijayendraServiceTax ಲೂಟಿಯ ಹಗರಣದ ಬಗ್ಗೆ ಸ್ವತಃ ಬಿಜೆಪಿಯ ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ. ಹೀಗಿದ್ದೂ "ನಾ ಖವುಂಗಾ, ಖಾನೆದುಂಗಾ" ಪ್ರಧಾನಿ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವುದೇಕೆ? ಐಟಿ, ಇಡಿಗಳೆಲ್ಲ ಆಪರೇಷನ್ ಕಮಲ ನಡೆಸಲು ಇರುವ ಟೂಲ್ ಕಿಟ್‌ಗಳು ಮಾತ್ರವೇ ಎಂದು ಪ್ರಶ್ನಿಸಿದೆ.

ಪ್ರಧಾನಿ ಮೋದಿ ಅವರೇ? ಎಂಎಸ್ಎಂಇ ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯದಲ್ಲಿ ಸುಮಾರು 30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಲೆಕ್ಕಕ್ಕೆ ಸಿಕ್ಕಿದ್ದಷ್ಟೇ, ಅಸಂಘಟಿತ ವಲಯದ ಕಾರ್ಮಿಕರ ಉದ್ಯೋಗ ನಷ್ಟ ಊಹೆಗೂ ನಿಲುಕದು. ನಿರುದ್ಯೋಗ ನೀಗಿಸಲು ಕ್ರಮ ಕೈಗೊಳ್ಳಬೇಕಾದ ಮಾನಗೆಟ್ಟ ಬಿಜೆಪಿ ಸರ್ಕಾರ ಕುರ್ಚಿ ಕದನದಲ್ಲಿ ಮುಳುಗಿದೆ ಎಂದು ಟೀಕಿಸಿದೆ.

ಸ್ವತಃ ಆಡಳಿತ ಪಕ್ಷದ ಶಾಸಕರಿಂದಲೇ ಫೋನ್ ಕದ್ದಾಲಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಸಿಎಂ ರಾಜೀನಾಮೆ ಕೊಟ್ಟಂತಹ ಇತಿಹಾಸ ಹೊಂದಿರುವ ಗಂಭೀರ ಆರೋಪ ಇದು. ರಮೇಶ್ ಜಾರಕಿಹೊಳಿ ಪ್ರಕರಣದಲ್ಲೂ ವಕೀಲರ ಫೋನ್ ಕದ್ದಾಲಿಕೆಯಾಗಿದೆ. ಈ ಬಗ್ಗೆ ಸಮಗ್ರವಾಗಿ ಉನ್ನತ ತನಿಖೆಯಾಗಬೇಕು. ಈ ಸರ್ಕಾರ ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ್ದೆಲ್ಲವನ್ನೂ ಮಾಡುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News