ಇನ್‌‌ಸ್ಟಾಗ್ರಾಮ್‌ ನಲ್ಲಿ 300 ಮಿಲಿಯನ್‌ ಫಾಲೋವರ್ಸ್‌: ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

Update: 2021-06-18 14:47 GMT
Photo: Twitter.com/Cristiano

ಫುಟ್ಬಾಲ್ ಅಂಗಳದಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿರುವ ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ ನಲ್ಲಿಯೂ ದಾಖಲೆ ನಿರ್ಮಿಸಿದ್ದು, 300 ಮಿಲಿಯನ್ (30 ಕೋಟಿ) ಫಾಲೋವರ್ಸ್ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶೇಷವೆಂದರೆ, ಇನ್‌ಸ್ಟಾಗ್ರಾಮ್‌ನಲ್ಲಿ 200 ಮಿಲಿಯನ್ ಫಾಲೋವರ್ಸ್ ಪಡೆದಿದ್ದ ಮೊದಲ ವ್ಯಕ್ತಿಯೂ ಕೂಡಾ ಕ್ರಿಸ್ಟಿಯಾನೊ ರೊನಾಲ್ಡೊ.

ರೊನಾಲ್ಡೊಗಿಂತ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿದ್ದು ಇನ್‌ಸ್ಟಾಗ್ರಾಮ್ ನ ಅಧಿಕೃತ ಖಾತೆ ಮಾತ್ರ. ಈ ಖಾತೆಯು 397 ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ನಂತರದ ಸ್ಥಾನದಲ್ಲಿ ಕ್ರಮವಾಗಿ ಡ್ವೇನ್ 'ದಿ ರಾಕ್' ಜಾನ್ಸನ್ (246 ಮಿಲಿಯನ್) ಹಾಗೂ ಅಮೇರಿಕಾದ ಗಾಯಕಿ ಅರಿಯಾನಾ ಗ್ರಾಂಡೆ (244 ಮಿಲಿಯನ್) ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News