ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

Update: 2021-06-19 05:20 GMT

ಹೊಸದಿಲ್ಲಿ: ಒಲಿಂಪಿಯನ್ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕ್ರೀಡಾಪಟುಗಳಾದ ಸಚಿನ್ ತೆಂಡುಲ್ಕರ್, ಪಿ.ಟಿ. ಉಷಾ, ಸುನೀಲ್ ಚೆಟ್ರಿ, ಅನಿಲ್ ಕುಂಬ್ಳೆ,  ವೀರೆಂದ್ರ ಸೆಹ್ವಾಗ್, ಸುರೇಶ್ ರೈನಾ, ಜಸ್ ಪ್ರೀತ್ ಬುಮ್ರಾ, ವೆಂಕಟೇಶ್ ಪ್ರಸಾದ್  ಸಹಿತ  ಹಲರು 'ಫ್ಲೈಯಿಂಗ್  ಸಿಖ್' ಖ್ಯಾತಿಯ ಮಿಲ್ಕಾ ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮಿಲ್ಕಾ ಸಿಂಗ್ ಜೀ ಅವರ ಬಳಿ ಮಾತನಾಡಿದ್ದೆ. ಅದು ನಮ್ಮ ಕೊನೆಯ ಸಂಭಾಷಣೆಯಾಗಿರಬಹುದು ಎಂದು ಭಾವಿಸಿರಲಿಲ್ಲ. ಹಲವಾರು ಉದಯೋನ್ಮುಖ ಕ್ರೀಡಾಪಟುಗಳು ಅವರ ಜೀವನ ಯಾನದಿಂದ ಸ್ಫೂರ್ತಿ ಪಡೆಯಲಿದ್ದಾರೆ. ಅವರ ಅಗಲುವಿಕೆಯ ಸಂತಾಪಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ.

ಮಿಲ್ಖಾ ಸಿಂಗ್ ನಿಧನದೊಂದಿಗೆ ಅಸಂಖ್ಯಾತ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದ ಕ್ರೀಡಾಪಟುವೊಬ್ಬರನ್ನು ನಾವು ಕಳೆದುಕೊಂಡಂತಾಗಿದೆ. ಅವರ ಪ್ರೇರಣಾದಾಯಕ ವ್ಯಕ್ತಿತ್ವವು ಲಕ್ಷಾಂತರ ಜನರನ್ನು ಸೆಳೆದಿತ್ತು ಎಂದು ಮತ್ತೊಂದು ಟ್ವೀಟ್ ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

‘’ಮಿಲ್ಕಾ ಸಿಂಗ್ ನಿಧನವು ನನ್ನನ್ನು ದುಃಖ ತಪ್ತನನ್ನಾಗಿ ಮಾಡಿದೆ. ಅವರ ಹೋರಾಟಗಳ ಕಥೆ ಹಾಗೂ ವ್ಯಕ್ತಿತ್ವದ ಶಕ್ತಿಯು ತಲೆಮಾರುಗಳ ಕಾಲ ಭಾರತೀಯರಿಗೆ ಸ್ಫೂರ್ತಿ ನೀಡಲಿದೆ. ಸಂತಾಪಗಳು’’ ಎಂದು ರಾಮನಾಥ್ ಕೋವಿಂದ್ ಶನಿವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News