ರಾಜ್ಯದಲ್ಲಿ ಎರಡು ಕಾಂಗ್ರೆಸ್ ಪಕ್ಷದ ಮುನ್ಸೂಚನೆ: ಸಚಿವ ಆರ್.ಅಶೋಕ್

Update: 2021-06-19 12:06 GMT

ಬೆಂಗಳೂರು, ಜೂ. 19: `ಕಾಂಗ್ರೆಸ್ ಒಡಕು ಅವರ ಜನ್ಮಸಿದ್ಧ ಹಕ್ಕಾಗಿದ್ದು, ಕಾಂಗ್ರೆಸ್ ಒಡಕಿನ ಮನೆಯಾಗಿದೆ. ಮಾತ್ರವಲ್ಲ ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಆಗುವ ಮುನ್ಸೂಚನೆ ಇದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಇದೀಗ ದೇಶದಲ್ಲಿ ನೂರೆಂಟು ಕಾಂಗ್ರೆಸ್ ಇದ್ದು, ಆದಷ್ಟು ಬೇಗ ಕರ್ನಾಟಕ ರಾಜ್ಯದಲ್ಲಿಯೂ ಎರಡು ಕಾಂಗ್ರೆಸ್ ಆಗಲಿದೆ. ಸಿದ್ದರಾಮಯ್ಯ ಕಾಂಗ್ರೆಸ್, ಡಿಕೆಶಿ ಕಾಂಗ್ರೆಸ್ ಆಗುವ ಮುನ್ಸೂಚನೆ ಇದೆ. ಕೇವಲ ಅವರು ಅಧಿಕಾರಕ್ಕಾಗಿ ಜೊತೆಗಿದ್ದಾರೆ ಅಷ್ಟೇ. ಆದರೆ ಅವರು ಮಾತ್ರ ಬೇರೆ ಬೇರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಬಿಜೆಪಿಯಲ್ಲಿ ಯಾವುದೇ ಒಡಕು ಇಲ್ಲ, ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಶಾಸಕರು ಕೂಡ ಮುಖ್ಯಮಂತ್ರಿ ಪರವಾಗಿ ಇದ್ದಾರೆ. ಈಗಾಗಲೇ ಬಹಿರಂಗ ಹೇಳಿಕೆ ಕೊಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾಯಕತ್ವ ಬಿಕ್ಕಟ್ಟು ಇದೀಗ ಮುಗಿದ ಅಧ್ಯಾಯ' ಎಂದು ಅಶೋಕ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News