ರಾಜ್ಯದಲ್ಲಿ 5,815 ಕೋವಿಡ್ ಪ್ರಕರಣಗಳು ದೃಢ: 161 ಸೋಂಕಿತರು ಮೃತ್ಯು

Update: 2021-06-19 17:28 GMT

ಬೆಂಗಳೂರು, ಜೂ.19: ರಾಜ್ಯದಲ್ಲಿ ಶನಿವಾರ ರಾಜ್ಯಾದ್ಯಂತ 5815 ಪ್ರಕರಣಗಳು ದಾಖಲಾಗಿದ್ದು, 161 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 28,01,936 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 33,763 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 1,30,872 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

161 ಮಂದಿ ಸಾವು: ಬಳ್ಳಾರಿ 10, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 4, ಬೆಂಗಳೂರು ನಗರ 23, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 7, ಚಿತ್ರದುರ್ಗ 4, ದಕ್ಷಿಣಕನ್ನಡ 16, ದಾವಣಗೆರೆ 11, ಧಾರವಾಡ 8, ಗದಗ 1, ಹಾಸನ 3, ಹಾವೇರಿ 6, ಕೊಡಗು 1, ಕೋಲಾರ 6, ಕೊಪ್ಪಳ 3, ಮಂಡ್ಯ 8, ಮೈಸೂರು 17, ರಾಯಚೂರು 2, ರಾಮನಗರ 1, ಶಿವಮೊಗ್ಗ 7, ತುಮಕೂರು 2, ಉಡುಪಿ 3, ಉತ್ತರಕನ್ನಡ 5, ವಿಜಯಪುರ 2  ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಶನಿವಾರ 5,815 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 11, ಬಳ್ಳಾರಿ 128, ಬೆಳಗಾವಿ 222, ಬೆಂಗಳೂರು ಗ್ರಾಮಾಂತರ 161, ಬೆಂಗಳೂರು ನಗರ 1263, ಬೀದರ್ 3, ಚಾಮರಾಜನಗರ 113, ಚಿಕ್ಕಬಳ್ಳಾಪುರ 105, ಚಿಕ್ಕಮಗಳೂರು 177, ಚಿತ್ರದುರ್ಗ 113, ದಕ್ಷಿಣ ಕನ್ನಡ 832, ದಾವಣಗೆರೆ 194, ಧಾರವಾಡ 83, ಗದಗ 28, ಹಾಸನ 391, ಹಾವೇರಿ 20, ಕಲಬುರಗಿ 28, ಕೊಡಗು 135, ಕೋಲಾರ 132, ಕೊಪ್ಪಳ 62, ಮಂಡ್ಯ 208, ಮೈಸೂರು 594, ರಾಯಚೂರು 16, ರಾಮನಗರ 24, ಶಿವಮೊಗ್ಗ 223, ತುಮಕೂರು 182, ಉಡುಪಿ 174, ಉತ್ತರಕನ್ನಡ 144, ವಿಜಯಪುರ 44, ಯಾದಗಿರಿ ಜಿಲ್ಲೆಯಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 23 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 1,263 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 23 ಸೋಂಕಿತರು ಮೃತಪಟ್ಟಿದ್ದಾರೆ. ಹಾಗೂ 2,821 ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿಯವರೆಗೆ ನಗರದಲ್ಲಿ 15,433 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿ ಒಟ್ಟು 72,263 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News