ಆತುರದ ಅನ್‍ಲಾಕ್ ನಿಂದ ಉಂಟಾಗುವ ಅವಘಡಕ್ಕೆ ರಾಜ್ಯ ಸರಕಾರವೇ ಹೊಣೆ: ಎಚ್.ಕೆ.ಕುಮಾರಸ್ವಾಮಿ

Update: 2021-06-20 12:54 GMT

ಬೆಂಗಳೂರು, ಜೂ. 20: ಕೋವಿಡ್ ಸಂಬಂಧ ರಾಜ್ಯ ಸರಕಾರ ಆತುರದಲ್ಲಿ ಅನ್‍ಲಾಕ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಉಂಟಾಗುವ ತೊಂದರೆಗಳ ಹೊಣೆಯನ್ನು ಸರಕಾರ ಹೊರಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಜಿಲ್ಲೆಗಳನ್ನು ಮಾತ್ರ ಮಾಡಲಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ನಿಬರ್ಂಧಗಳು ಮುಂದುವರೆಸಲಾಗಿ. ಪರಿಸ್ಥಿತಿ ಹೀಗಿರುವಾಗ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆ ನಡುವೆ ಜನರ ಓಡಾಟ ಇರುವುದರಿಂದ ಸೋಂಕು ಹರಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದರು.

ಆನ್‍ಲಾಕ್ ಆದರೂ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡದಂತೆ ತಡೆಯುವ ಪ್ರಯತ್ನ ಮುಂದುವರಿಸಬೇಕು. ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದ ಅವರು, ಒಂದೆಡೆ ಬಿಜೆಪಿ ಪಕ್ಷದೊಳಗಿನ ಒಳಜಗಳ ಮತ್ತೊಂದೆಡೆ ನಾಯಕತ್ವದ ಗೊಂದಲದಿಂದ ಜನರು ರೋಸಿ ಹೋಗಿದ್ದಾರೆ. ಸರ್ಕಾರ ಮತ್ತು ಪಕ್ಷದಲ್ಲಿನ ಒಳಜಗಳ ಆಡಳಿತದ ಮೇಲೆ ಪರಿಣಾಮ ಬೀರಿದ್ದು, ಜನರು ತಬ್ಬಲಿಗಳಾದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮತ್ತೊಂದೆಡೆ ಕೋವಿಡ್ ಸಂಕಷ್ಟದೊಂದಿಗೆ ಬೆಲೆ ಏರಿಕೆಯ ಹೊರೆ ಹೊರಬೇಕಾಗಿದೆ. ಹೀಗಾಗಿ ಜನರಲ್ಲಿ ಉತ್ಸಾಹವೇ ಇಲ್ಲದಂತಾಗಿದೆ. ಅನ್‍ಲಾಕ್ ನಿಂದ ಜನರಿಗೆ ಒಳ್ಳೆಯದಾಗಲಿ. ಸೋಂಕು ದೂರವಾಗಿ ಸಹಜ ಸ್ಥಿತಿಗೆ ಮರಳಿದರೆ ಅನುಕೂಲವಾಗಲಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News