ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸತೀಶ್ ರೆಡ್ಡಿ ಪಾತ್ರದ ಬಗ್ಗೆ ತನಿಖೆ ಇಲ್ಲವೇಕೇ?: ಕಾಂಗ್ರೆಸ್ ಪ್ರಶ್ನೆ

Update: 2021-06-20 14:06 GMT

ಬೆಂಗಳೂರು, ಜೂ. 20: `ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಖಾತೆಗೆ ಕೋವಿಡ್ ಸೋಂಕಿತರಿಂದ ಹಣ ಜಮೆಯಾಗಿದ್ದು ಪತ್ತೆಯಾಗಿದೆ, ಇದರಲ್ಲಿ ಸತೀಶ್ ರೆಡ್ಡಿಯ ಪಾತ್ರದ ಬಗ್ಗೆ ತನಿಖೆ ಇಲ್ಲವೇಕೆ? ಸರಕಾರ ರಕ್ಷಣೆಗೆ ನಿಂತಿದ್ದೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕೋಮು ಬಣ್ಣ ಬಳಿದು ಮೆಡಿಕಲ್ ಟೆರರಿಸಂ(ವೈದ್ಯಕೀಯ ಭಯೋತ್ಪಾದನೆ) ಎಂಬ ಹೊಸ ಟೈಟಲ್ ಸೃಷ್ಟಿಸಿದ್ದ ಭ್ರಷ್ಟ ರಾಜ್ಯ ಬಿಜೆಪಿ ಈಗೇಕೆ ಮೌನ?' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕೋವಿಡ್ ತಜ್ಞರ ಸಮಿತಿ ಮೂರನೇ ಅಲೆಯ ಎಚ್ಚರಿಕೆ ನೀಡಿದ್ದಾರೆ, ಸರಕಾರ ಮೂರನೇ ಸುತ್ತಿನ ಜಂಗಿ ಕುಸ್ತಿಯಲ್ಲಿ ನಿರತವಾಗಿದೆ! ತಜ್ಞರು ಮಕ್ಕಳಿಗೆ ಸೋಂಕು ಬಹುವಾಗಿ ಕಾಡುವ ಮುನ್ಸೂಚನೆ ನೀಡಿದ್ದಾರೆ, ಸರಕಾರ ಕೂಡಲೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಾರ್ಯಕ್ರಮ ಕೈಗೊಳ್ಳಬೇಕಿದೆ, ಅಗತ್ಯ ವೈದ್ಯಕೀಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾಡುವುದೇ....?' ಎಂದು ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದೆ.

ಹಾಳೂರಿಗೆ ಉಳಿದವ್ನೆ ಪಟೇಲ' ಎಂಬಂತೆ ಪಾಳುಬಿದ್ದ ಬಿಜೆಪಿಗೆ ಯಡಿಯೂರಪ್ಪರನ್ನ ಬಿಟ್ಟರೆ ಗತಿ ಇಲ್ಲದಂತಾಗಿದೆ. ಕುಂಟೆತ್ತಿನ ಗಾಡಿಯಂತೆ ಓಲಾಡಿ, ತೇಲಾಡಿಕೊಂಡು ಸಾಗುತ್ತಿರುವ ಬಿಜೆಪಿ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ನಮ್ಮ ತಟ್ಟೆಯನ್ನು ಇಣುಕುವುದನ್ನು ಬಿಟ್ಟು ಬಾಂಬೆಗೆ ಹಾರಿದ ನಿಮ್ಮವರ ಬಗ್ಗೆ ಗಮನಿಸಿ' ಎಂದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News