ರಸ್ತೆ ಮಧ್ಯೆ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ: ಚಿಕಿತ್ಸೆ ಫಲಿಸದೆ ಸಾವು

Update: 2021-06-20 17:54 GMT

ಮೈಸೂರು,ಜೂ.20: ಮಾನಸಿಕ ಅಸ್ವಸ್ಥರೊಬ್ಬರು ರಸ್ತೆ ಮಧ್ಯದಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಬಳಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕನ್ನಳ್ಳಿ ಮೋಳೆ ಗ್ರಾಮದ ಶಿವಣ್ಣ(42) ಮೃತಪಟ್ಟ ವ್ಯಕ್ತಿ. ಶಿವಣ್ಣ ಮಾನಸಿಕ ಅಸ್ವಸ್ಥರಾಗಿದ್ದು ಇವರನ್ನು ಚಿಕಿತ್ಸೆಗೆಂದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಮಾರ್ಗ ಮಧ್ಯೆ ವಾಹನದಿಂದ ಜಿಗಿದು ರಸ್ತೆ ಮಧ್ಯೆ ಕುಳಿತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇವರ ವರ್ತನೆ ಕಂಡು ಸಾರ್ವಜನಿಕರು ಗಾಬರಿಯಾಗಿದ್ದಾರೆ. ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News