ಪೆಲಸ್ತೀನ್‌ಗೆ 1 ಮಿಲಿಯ ಕೊರೋನವೈರಸ್ ಲಸಿಕೆ ರವಾನಿಸಲು ಇಸ್ರೇಲ್ ನಿರ್ಧಾರ

Update: 2021-06-21 17:27 GMT

ಜೆರುಸಲೇಂ, ಜೂ.21: ಶೀಘ್ರವೇ ವಾಯಿದೆ ಮುಗಿಯಲಿರುವ ಸುಮಾರು 1 ಮಿಲಿಯನ್ ಕೊರೋನ ವೈರಸ್ ಲಸಿಕೆಯನ್ನು ಪೆಲಸ್ತೀನ್‌ಗೆ ರವಾನಿಸಲಾಗುವುದು. ಮುಂದಿನ ಕೆಲ ತಿಂಗಳಲ್ಲಿ ಪೆಲಸ್ತೀನ್‌ಗೆ ರವಾನೆಯಾಗಲಿರುವ ಲಸಿಕೆಯಲ್ಲಿ ಇಷ್ಟೇ ಪ್ರಮಾಣದ ಲಸಿಕೆಯನ್ನು ಮರಳಿಸಬೇಕು ಎಂಬ ಷರತ್ತಿನಡಿ ಈ ವಿನಿಮಯ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೇಲ್ ಶುಕ್ರವಾರ ಹೇಳಿದೆ. ಶೀಘ್ರದಲ್ಲೇ ವಾಯಿದೆ ಮುಗಿಯಲಿರುವ ಫೈಝರ್ ಲಸಿಕೆಯ 1 ಮಿಲಿಯನ್ ಡೋಸ್‌ಗಳನ್ನು ಪೆಲಸ್ತೀನ್‌ಗೆ ನೀಡುತ್ತೇವೆ. ಅಕ್ಟೋಬರ್ ವೇಳೆಗೆ ಪೆಲಸ್ತೀನ್‌ಗೆ ದೊರಕಲಿರುವ ಲಸಿಕೆಯಿಂದ ಇದನ್ನು ಮರಳಿಸಬೇಕು ಎಂಬ ಒಪ್ಪಂದವನ್ನು ರವಿವಾರ ಅಧಿಕಾರ ವಹಿಸಿಕೊಂಡ ಇಸ್ರೇಲ್ ಸರಕಾರ ಘೋಷಿಸಿದೆ.

ದೇಶದ ಸುಮಾರು 85% ಪ್ರಜೆಗಳಿಗೆ ಲಸಿಕೆ ಹಾಕಿರುವ ಇಸ್ರೇಲ್ ಆಡಳಿತ, ತನ್ನ ವಶದಲ್ಲಿರುವ ವೆಸ್ಟ್‌ಬ್ಯಾಂಕ್ ಮತ್ತು ಗಾಝಾ ಪಟ್ಟಿಯಲ್ಲಿ ವಾಸಿಸುತ್ತಿರುವ ಸುಮಾರು 4.5 ಮಿಲಿಯನ್ ಪೆಲಸ್ತೀನಿಯರನ್ನು ನಿರ್ಲಕ್ಷಿಸಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ತನ್ನ ವಶದಲ್ಲಿರುವ ಪ್ರದೇಶದ ಜನತೆಗೆ ಲಸಿಕೆ ನೀಡುವ ಹೊಣೆ ಇಸ್ರೇಲ್‌ನದ್ದು ಎಂದು ಬಲಪಂಥೀಯ ಗುಂಪು ಹೇಳಿದ್ದರೆ, ಇದನ್ನು ನಿರಾಕರಿಸಿರುವ ಇಸ್ರೇಲ್, 1990ರಲ್ಲಿ ಪೆಲಸ್ತೀನ್‌ನೊಂದಿಗೆ ಕೈಗೊಂಡ ಮಧ್ಯಂತರ ಶಾಂತಿ ಒಪ್ಪಂದದ ಅಂಶಗಳನ್ನು ಉಲ್ಲೇಖಿಸಿದೆ. ವಿಶ್ವದಲ್ಲೇ ಅತ್ಯಂತ ಯಶಸ್ವೀ ಲಸಿಕೀಕಿರಣ ಅಭಿಯಾನ ಇಸ್ರೇಲ್‌ನಲ್ಲಿ ನಡೆದಿದ್ದು ದೇಶದಲ್ಲಿ ಈಗ ಶಾಲೆ, ವ್ಯಾಪಾರ ಅಂಗಡಿಗಳು ಪೂರ್ಣಪ್ರಮಾಣದಲ್ಲಿ ತೆರೆದಿದೆ. ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಎಂಬ ನಿಯಮವನ್ನೂ ರದ್ದುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News